

ಬೀದರ್: ಬೀದರ್ ಔಷಧ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘ ನಿಯಮಿತದ 2022-23ನೇ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ 10 ರಷ್ಟು ಪಾಲು ಕೊಡಲಾಗುವುದು ಎಂದು ಸಂಘದ ಅಧ್ಯಕ್ಷ ಮಲ್ಲಪ್ಪ ಬಿರಾದಾರ ತಿಳಿಸಿದರು.
ಇಲ್ಲಿಯ ಜನವಾಡ ರಸ್ತೆಯಲ್ಲಿನ ದೂರದರ್ಶನ ಕೇಂದ್ರದ ಹಿಂದುಗಡೆಯ ಗಣೇಶ ಏಜೆನ್ಸಿ ಸಮೀಪದ ಫಾರ್ಮಾ ಭವನದಲ್ಲಿ ನಡೆದ ಸಂಘದ 18ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಸಂಘ ರೂ. 1.88 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬಸವರಾಜ ಕೆ. ಪಾಟೀಲ, ನಿರ್ದೇಶಕರಾದ ಓಂರೆಡ್ಡಿ ಎಸ್.ಎನ್, ಮಹಮ್ಮದ್ ಆತೆಷಮುಲ್ ಹಕ್, ವೀರಕುಮಾರ ಮಜಗೆ, ಶಿವರಾಜ ಪಾಟೀಲ, ಮಹಮ್ಮದ್ ಖಾಲೀದ್ ಷರೀಫ್, ಗಜಲಕ್ಷ್ಮಿ ಎಸ್. ಸಾವಳಗಿ, ಬಲಭೀಮ ಕಾಂಬಳೆ, ಕಲಾವತಿ ಎಸ್. ಕಾಳಗಾಪುರೆ, ಅಂಬಿಕಾ ಆರ್. ಮಣಗೀರೆ, ಪ್ರಕಾಶ ಬಿ. ಪಾಟೀಲ, ಮಂಜುನಾಥ ಎ. ಬಿರಾದಾರ, ಸಿಇಒ ರಾಜೇಂದ್ರ ಎಸ್. ಮಣಗೀರೆ, ಷೇರುದಾರ ಮಹಮ್ಮದ್ ತಹ ಕಲೀಮ್ ಉಲ್ಲಾ ಮೊದಲಾದವರು ಇದ್ದರು.