

ಬೀದರ್: ಇಲ್ಲಿಯ ಸುವಿಧಾ ಸಹಕಾರ ಸಂಘ ನಿಯಮಿತವು ತನ್ನ ಷೇರುದಾರರ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ. ನಗರದ ಜೆಸ್ಕಾಂ ಕಚೇರಿ ಎದುರು ಇರುವ ಸಂಘದ ಕಚೇರಿಯಲ್ಲಿ ನಡೆದ ನಾಲ್ಕನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಈ ವಿಷಯ ತಿಳಿಸಿದರು.
ಸದ್ಯ 600 ಷೇರುದಾರರು ಇದ್ದಾರೆ. ಬರುವ ದಿನಗಳಲ್ಲಿ ಈ ಸಂಖ್ಯೆಯನ್ನು ವೃದ್ಧಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುವ ಉದ್ದೇಶ ಸಂಘದ್ದಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷೆ ಪ್ರೇಮಿಲಾ ಆರ್. ಮಠಪತಿ, ನಿರ್ದೇಶಕರಾದ ಬಾಬುರಾವ್ ಬಿರಾದಾರ, ಮಾರುತಿ ಬೌದ್ಧೆ, ರಾಜೇಂದ್ರ ರೆಡ್ಡಿ, ಎಂ.ಡಿ. ಶನೀರ್ ಅಹಮ್ಮದ್, ಹೇಮಲತಾ ಎಸ್. ಪಾಟೀಲ, ಪ್ರಮುಖರಾದ ಆರ್.ಜಿ. ಮಠಪತಿ, ಸುನೀಲ್ ಪಾಟೀಲ, ಅನಿಲಕುಮಾರ ಪಾಟೀಲ, ರಾಜಕುಮಾರ ಸಾಲಿ, ನಾಗೇಂದ್ರ ಚಪಟೆ, ಸಂಜುಕುಮಾರ ಕುಲಕರ್ಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಪಕುಮಾರ ರಾಂಪುರೆ ಇದ್ದರು.