ಶಿಕ್ಷಕಿ ಸಾಯಮ್ಮಗೆ ಜಿಲ್ಲಾಮಟ್ಟದ ಪ್ರಶಸ್ತಿ

Teacher Sayamma Sanman Photo
Published on

ಬೀದರ್: ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾದ ಭಾಲ್ಕಿ ತಾಲ್ಲೂಕಿನ
ದಾಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಾಯಮ್ಮ ಶ್ರೀಕಾಂತ ಪುಣೆ ಅವರನ್ನು ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಸತ್ಕರಿಸಿದರು.
ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಸಾಯಮ್ಮ ಅವರು 19 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮಕಾರಿ ಬೋಧನೆಗೆ ಹೆಸರಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತಿದ್ದಾರೆ ಎಂದು ಹಳೆಯ ವಿದ್ಯಾರ್ಥಿಗಳು ನುಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಪ್ರಮುಖರಾದ ಸಹದೇವ, ಅಶೋಕ ಕುಂಬಾರ, ಆನಂದ ಹಳೆಂಬುರೆ, ಮಹಮ್ಮದ್ ಹನೀಫ್, ಸಂತೋಷಕುಮಾರ ವಾಡೆ, ಸಂತೋಷಿ ಧಬಾಲೆ, ಭುವನೇಶ್ವರ, ಅಶೋಕಕುಮಾರ ಕಲ್ಯಾಣಿ, ಮಹೇಶ, ರೇವಣಸಿದ್ದಪ್ಪ ಸುಣಗಾರ, ವೀರೇಶ ಲಿಗಾಡೆ, ಲಕ್ಷ್ಮಿ ಪರಸಣೆ, ರೇಣುಕಾ ರೇವಣಸಿದ್ದ, ಮಹಾದೇವ, ವೀರೇಶ ಪಾಟೀಲ, ಸುನೀಲಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net