

ಬೀದರ್: ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಎಲ್ಲರ ಆದ್ಯತೆಯಾಗಬೇಕು ಎಂದು ಡಾ. ಪೃಥ್ವಿರಾಜ ಎಸ್. ಲಕ್ಕಿ ಹೇಳಿದರು.
ಇಲ್ಲಿಯ ಅರುಣೋದಯ ಶಾಲೆಯಲ್ಲಿ ಮಾಲಿನ್ಯ ಹಾಗೂ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಣೇಶ ಹಬ್ಬವನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಬೇಕಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಮಾತನಾಡಿ, ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಪ್ರೌಢಶಾಲೆ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ, ಶಿಕ್ಷಕರಾದ ಸುಮೀತಕುಮಾರ, ಮಾರುತೆಪ್ಪ, ನೀಲಮ್ಮ, ಸಾರಿಕಾ, ಪಲ್ಲವಿ, ಜ್ಯೋತಿ, ಪೂಜಾ, ಚಂದ್ರಕಲಾ, ಸುನೀತಾ, ಸುಜಾತಾ, ಭಾಗ್ಯಶ್ರೀ, ಪೂಜಾ ಕಡ್ಡೆ, ಶೈಲಜಾ ಇದ್ದರು. ಅಲ್ಕಾವತಿ ಎಚ್, ನಿರೂಪಿಸಿದರು.