ಶ್ರಾವಣ ಪ್ರವಚನ ಸಮಾರೋಪ

Shivkumar Swamiji
Published on

ಬೀದರ್: ನಗರದ ಸಿದ್ಧಾರೂಢ ಮಠದಲ್ಲಿ ಗುರುವಾರ ಶ್ರಾವಣ ಪ್ರವಚನ ಸಮಾರೋಪಗೊಳ್ಳಲಿದೆ.
ಮಠದ ಪೀಠಾಧೀಪತಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಗ್ಗೆ 10ಕ್ಕೆ ಭಜನೆ, 11ಕ್ಕೆ ಸಿದ್ಧಾರೂಢರಿಗೆ ಅಭಿಷೇಕ, ಪೂಜ್ಯರ ಪಾದಪೂಜೆ, ಮಧ್ಯಾಹ್ನ 12ಕ್ಕೆ ಪ್ರವಚನ ಬಳಿಕ ಮಹಾ ಪ್ರಸಾದ ವಿತರಣೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದ್ಗುರು ಕೃಪೆಗೆ ಪಾತ್ರರಾಗಬೇಕು ಎಂದು ಮಠದ ಆಡಳಿತಾಧಿಕಾರಿ ಡಾ.ಹಾವಗಿರಾವ್ ಮೈಲಾರೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net