ಮಲ್ಲಮ್ಮ ಸಂಘಕ್ಕೆ ರೂ. 3 ಲಕ್ಷ ಲಾಭ

Mallamma Sang - Copy
Published on

ಬೀದರ್: ಇಲ್ಲಿಯ ಶಿವನಗರದಲ್ಲಿ ಇರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವಿವಿಧೊದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತವು 2022-23ನೇ ಸಾಲಿನಲ್ಲಿ ಒಟ್ಟು ರೂ. 3.08 ಲಕ್ಷ ನಿವ್ವಳ ಲಾಭ ಗಳಿಸಿದೆ.
ಸಂಘದ ಕಚೇರಿಯಲ್ಲಿ ನಡೆದ 11ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸಂಗ್ರಾಮರಡ್ಡಿ ಹುಣಸಗೇರಿ ಅವರು ಈ ಮಾಹಿತಿ ನೀಡಿದರು.
11 ವರ್ಷಗಳಿಂದ ಸಂಘ ನಿರಂತರ ಲಾಭದಲ್ಲಿ ಮುನ್ನಡೆದಿದೆ ಎಂದು ತಿಳಿಸಿದರು.
ಬಿ.ವಿ.ಬಿ. ಕಾಲೇಜು ಪ್ರಾಚಾರ್ಯ ಡಾ. ವಿಠ್ಠಲರಡ್ಡಿ ಉದ್ಘಾಟಿಸಿದರು. ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶಂಕರ ರಡ್ಡಿ ಚಿಟ್ಟಾ, ನಿವೃತ್ತ ಉಪನ್ಯಾಸಕ ಬಸವರಾಜ ಕೊಡಂಬಲ್, ಜಗನ್ನಾಥ ರಡ್ಡಿ, ಎಸ್.ಬಿ. ವಿಸಾಜಿ, ನಿರ್ದೇಶಕರಾದ ಗುರುನಾಥರಡ್ಡಿ ಪಡಗೆ, ಕೆ. ಶರಣಪ್ಪ ರಡ್ಡಿ, ಭೀಮಣ್ಣ ಕೆ. ಚಾಮರಡ್ಡಿ, ಆಕಾಶ ರಡ್ಡಿ, ಕೆ. ಪರ್ವತರಡ್ಡಿ, ದತ್ತಾತ್ರಿ ರಡ್ಡಿ, ರವಿ ರಡ್ಡಿ, ಮಹೇಶ ರಡ್ಡಿ, ಸುವರ್ಣಾ, ಕರುಣಾ ರಡ್ಡಿ ಇದ್ದರು.
ಶ್ರೀನಿವಾಸ ರಡ್ಡಿ ಗುಮ್ಮಾ ಸ್ವಾಗತಿಸಿದರು. ಗೋವಿಂದ ರಡ್ಡಿ ನಿರೂಪಿಸಿದರು. ಶ್ರೀನಿವಾಸ ರಡ್ಡಿ ಮುದನಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net