

ಭಾಲ್ಕಿ: ಬಸವ ಕಾಯಕ ದಾಸೋಹ (ಬಿಕೆಡಿ) ಫೌಂಡೇಷನ್ನಿಂದ ತಾಲೂಕಿನ ಧನ್ನೂರ(ಎಚ್) ಗ್ರಾಮದಲ್ಲಿ ಐವರು ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು.
ಹಿರಿಯ ಉದ್ಯಮಿ ಕಾಶಪ್ಪ ಧನ್ನೂರ ಸ್ಮರಣೋತ್ಸವ ನಿಮಿತ್ತ ನಡೆದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಓದುತ್ತಿರುವ ನದೀಮ್ ಅಬ್ಬಾಸ್, ಮಲ್ಲಿಕಾರ್ಜುನ ರಾಜಶೇಖರ, ರೇಷ್ಮಾ ಪಾಂಡುರಂಗ, ಶ್ರದ್ಧಾ ಹೊಸಾಳೆ, ನಿಕಿತಾ ಹಾಳೆ ಅವರಿಗೆ ತಲಾ ರೂ. 5 ಸಾವಿರ ವಿದ್ಯಾನಿಧಿ ವಿತರಿಸಲಾಯಿತು. ಕಲ್ಯಾಣ ಕರ್ನಾಟಕ ಎಜುಕೇಷನ್ ಐಕಾನ್ ಪ್ರಶಸ್ತಿ ಪುರಸ್ಕೃತ ಪ್ರೌಢಶಾಲಾ ಶಿಕ್ಷಕ ಶಿವಲಿಂಗ ಹೇಡೆ ಅವರನ್ನು ಸತ್ಕರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಡಾ.ಗಂಗಾದೇವಿ ಮಾತನಾಡಿ, ಕಾಶಪ್ಪ ಧನ್ನೂರ ಅವರು ಕಾಯಕ-ದಾಸೋಹಕ್ಕೆ ಹೆಸರಾಗಿದ್ದರು. ಸತ್ಯಶುದ್ಧ ಕಾಯಕದಿಂದ ಬಂದ ಹಣವನ್ನು ಕುಟುಂಬ, ಸಮಾಜ ಹಾಗೂ ಧರ್ಮ ಕಾರ್ಯಕ್ಕೆ ವಿನಿಯೋಗಿಸಿ ಆದರ್ಶ ಬದುಕು ಸಾಗಿದ್ದರು ಎಂದು ಹೇಳಿದರು.
ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿದರು. ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಡಾ.ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಅಶೋಕ ದಾಮಾ ಉದ್ಘಾಟಿಸಿದರು. ಸದರ್ಾರ್ ವಲ್ಲಭಭಾಯ್ ಪಟೇಲ್ ಪ್ರತಿಷ್ಠಾನ ಅಧ್ಯಕ್ಷ ಶಿವಶರಣಪ್ಪ ವಾಲಿ ಧ್ವಜಾರೋಹಣ ಮಾಡಿದರು. ಗುಂಡೇರಾವ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಡಾ. ಚಂದ್ರಕಾಂತ ಗುದಗೆ, ಡಾ.ಓಂಕಾರ ಸ್ವಾಮಿ, ಶರಣಪ್ಪ ಮಿಠಾರೆ, ರಾಜೇಂದ್ರ ಜೊನ್ನಿಕೇರಿ, ಜೈರಾಜ ಖಂಡ್ರೆ, ಕಂಟೆಪ್ಪ ದಾನಾ ಇತರರಿದ್ದರು. ಸುವರ್ಣಾ ಧನ್ನೂರ ಬಸವಪೂಜೆ ನೆರವೇರಿಸಿದರು. ಬಸವರಾಜ ಹಾಲಹಳ್ಳಿ ನಿರೂಪಣೆ ಮಾಡಿದರು. ಸ್ಪೂರ್ತಿ ಧನ್ನೂರ ವಂದಿಸಿದರು.