

ಬೀದರ್: ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಹಾಗೂ ಭಾಲ್ಕಿ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು.
ವಿವರ ಹೀಗಿದೆ. ಜಿಲ್ಲಾ ಘಟಕ: ಬಸವರಾಜ ಕುಶನೂರ (ಕಾರ್ಯಾಧ್ಯಕ್ಷ).
ಭಾಲ್ಕಿ ತಾಲ್ಲೂಕು ಘಟಕ: ಕುಪೇಂದ್ರ(ಅಧ್ಯಕ್ಷ), ಬಾಲಾಜಿ ಕಾಂಬಳೆ (ಉಪಾಧ್ಯಕ್ಷ), ಸತೀಶ್ ಸಿದ್ಧೇಶ್ವರ (ಪ್ರಧಾನ ಕಾರ್ಯದರ್ಶಿ) ಹಾಗೂ ಮಿಲಿಂದ್ ಕಾಂಬಳೆ (ಖಜಾಂಚಿ).
ಸಭೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಟಾಳೆ, ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ವೀರಭದ್ರಪ್ಪ ಚಟ್ನಳ್ಳೆ, ರವಿಕುಮಾರ ಕುಮನೂರ, ಜಯರಾಜ ದಾಬಶೆಟ್ಟಿ, ಬಸವಪ್ರಭು, ಗಣಪತಿ ಬೋಚರೆ ಇದ್ದರು.