ಬದುಕಿನ ಸಾರ್ಥಕತೆಗೆ ಸಮಾಜಕ್ಕೆ ಕೊಡುಗೆ ನೀಡಿ

infinity School Manadalada Maatu programee
Published on

ಬೀದರ್: ಬದುಕಿನ ಸಾರ್ಥಕತೆಗೆ ಪ್ರತಿಯೊಬ್ಬರೂ ಸಮಾಜಕ್ಕೆ ಸಾಧ್ಯವಾದ ಕೊಡುಗೆ ನೀಡಬೇಕು ಎಂದು ಡಾ. ರಘು ಕೃಷ್ಣಮೂರ್ತಿ ಸಲಹೆ ಮಾಡಿದರು.

ನಗರದ ಇನ್ಫಿನಿಟಿ ಶಾಲೆಯ ನೂತನ ಆವರಣದಲ್ಲಿ ಈಚೆಗೆ ನಡೆದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೃತ್ತಿ ಜೀವನದ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ನೈತಿಕತೆಯ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.

ಅಂತರರಾಷ್ಟ್ರೀಯ ರೋಟರಿ ಸಂಸ್ಥೆ, ಭಾರತೀಯ ಕುಟುಂಬ ಯೋಜನಾ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜಕ್ಕೆ ಸಲ್ಲಿಸಿದ ಸೇವೆ ತಮಗೆ ತೃಪ್ತಿ ಉಂಟು ಮಾಡಿದೆ ಎಂದು ಹೇಳಿದರು.

ಮನೆಯ ವಾತಾವರಣವು ಮಕ್ಕಳ ಮೇಲೆ ಬಹುವಾಗಿ ಪ್ರಭಾವ ಬೀರುತ್ತದೆ. ಹೀಗಾಗಿ ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಸಾಧಕರೊಂದಿಗೆ ಸಂವಾದದ ಮೂಲಕ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಸಮಾಜಕ್ಕೆ ಪ್ರೇರಣೆ ನೀಡುವುದು ಮನದಾಳದ ಮಾತು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಶಾಲೆಯ ಸಂಸ್ಥಾಪಕ ನಿರಂಜನ ಶೀಲವಂತ ಹೇಳಿದರು.

ಮನದಾಳದ ಮಾತು ಸರಣಿಯ ಐದನೇ ಕಾರ್ಯಕ್ರಮ ನವೆಂಬರ್ 23 ರಂದು ನಡೆಯಲಿದೆ ಎಂದು ತಿಳಿಸಿದರು.

ಡಾ. ಆರತಿ ಕೃಷ್ಣಮೂರ್ತಿ ತಮ್ಮ ಸಾಧನೆಯ ಪಯಣವನ್ನು ಹಂಚಿಕೊಂಡರು. ಶಾಲೆಯ ಸಂಯೋಜಕಿ ಲಕ್ಷ್ಮಿ ಮುಗಳಿ, ಬೋಧಕ, ಬೋಧಕೇತರ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net