ಗಾಯಾಳು ಯೋಧರ ಸಾಮರ್ಥ್ಯ ವೃದ್ಧಿಗೆ ರ‌್ಯಾಲಿ

17 Jaggu 6
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಲೆಫ್ಟಿನಂಟ್ ಜನರಲ್ ಆಸ್ೀ ಮಿಸಿ ಮಾತನಾಡಿದರು. ಬ್ರಿಗೇಡಿಯರ್ ಜಾಯ್‌ದೀಪ ಮುಖರ್ಜಿ, ಬ್ರಿಗೇಡಿಯರ್ ಸಂದೀಪಕುಮಾರ ಇದ್ದರು.
Published on

ಬೆಳಗಾವಿ: ಮರಾಠ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಕೇಂದ್ರದ ಯುದ್ಧ ಗಾಯಾಳುಗಳ ೌಂಡೇಷನ್ ವತಿಯಿಂದ ಯುದ್ಧದಲ್ಲಿ ಗಾಯಗೊಂಡಿರುವ ಯೋಧರ ಸಾಮರ್ಥ್ಯ ವೃದ್ಧಿಸಲು 18ರಂದು ನಗರದಲ್ಲಿ ವಿಶೇಷ ರ‌್ಯಾಲಿ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಪಡೇಷನ್ ಅಧ್ಯಕ್ಷ, ನಿವೃತ್ತ ಲೆಫ್ಟಿನಂಟ್ ಜನರಲ್ ಆಸ್ೀ ಮಿಸಿ ತಿಳಿಸಿದರು.

ನಗರದ ಎಂಎಲ್‌ಐಆರ್‌ಸಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ನಮ್ಮ ಯೋಧರು ಮಾಡಿದ ತ್ಯಾಗಗಳು ಅಮೂಲ್ಯ. ಯುದ್ಧಗಳಲ್ಲಿ ಹಲವರು ಹುತಾತ್ಮರಾದರೆ, ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಸೆಣಸಾಡಿ ಯುದ್ಧವೆನೋ ಗೆದ್ದರು. ಆದರೆ, ಗಾಯಗೊಂಡು ಜೀವನನೊಂದಿಗೆ ಅವರ ಯುದ್ಧ ಆರಂಭವಾಗಿದೆ. ಕುಟುಂಬ ಕೂಡ ಅವರೊಂದಿಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಯುದ್ಧದಲ್ಲಿ ಗಾಯಗೊಂಡು ಜೀವನದುದ್ದಕ್ಕೂ ಪರಿತಪಿಸುತ್ತಿರುವ ಯೋಧರ ಆರೈಕೆಯನ್ನು ಪಡೇಷನ್‌ನಿಂದ ಮಾಡಲಾಗುತ್ತದೆ. ನೌಕಾದಳ, ಅಗ್ನಿವೀರರು, ಎಲ್ಲ ವಿಭಾಗದ ಗಾಯಗೊಂಡ ಯೋಧರ ಆರೈಕೆ ಮಾಡಿ ಅವರನ್ನು ಸಮರ್ಥರನ್ನಾಗಿಸುವ ಕಾರ್ಯವನ್ನು ಪಡೇಷನ್ ಮಾಡುತ್ತಿದೆ ಎಂದರು.

ೌಂಡೇಷನ್ ಅನ್ನು ಯುದ್ಧದಲ್ಲಿ ಗಾಯಗೊಂಡ ನಿವೃತ್ತ ಲೆಫ್ಟಿನಂಟ್ ವಿಜಯ ಓಬೆರಾಯ್ ಹಾಗೂ ಇನ್ನುಳಿದವರಿಂದ 2002ರಲ್ಲಿ ಹುಟ್ಟು ಹಾಕಲಾಗಿದೆ. ಸರ್ಕಾರದ ಸೇವೆಗಳನ್ನು ಪಡೆಯಲು ಉಂಟಾಗುವ ತೊಂದರೆ, ಇನ್ನುಳಿದ ಸಮಸ್ಯೆ ನಿವಾರಿಸುವ ಕಾರ್ಯವನ್ನು ೌಂಡೇಷನ್ ಮಾಡುತ್ತಿದೆ. 18ರಂದು ಗಾಯಗೊಂಡ ಯೋಧರ ಉಪಸ್ಥಿತಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೌಂಡೇಷನ್ ಮುನ್ನಡೆಸಲು ಕಾರ್ಪೋರೇಟ್ ಕಂಪನಿಗಳು ಕೈ ಜೋಡಿಸುತ್ತಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ರಿಗೇಡಿಯರ್ ಜಾಯ್‌ದೀಪ ಮುಖರ್ಜಿ, ಬ್ರಿಗೇಡಿಯರ್ ಸಂದೀಪಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net