ವರ್ತಿ ಸಿದ್ದಬಸವೇಶ್ವರರ ಜಾತ್ರೆ

Ratostav
Published on

ಬೈಲಹೊಂಗಲ: ತಾಲೂಕಿನ ಸುೇತ್ರ ಬೆಲವಾಡ ಗ್ರಾಮದ ವರ್ತಿಮಠದ ಸಿದ್ಧಬಸವೇಶ್ವರರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಲಿಂ. ಗುರುಪಾದ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ಮೇ 12ರಂದು ಬೆಳಗ್ಗೆ 11 ಗಂಟೆಗೆ ಮಠದ ಆವರಣದಲ್ಲಿ ಜರುಗಲಿದೆ. ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮುನವಳ್ಳಿ ಸೋಮಶೇಖರ ಮಠದ ಮುರಂದ್ರ ಶ್ರೀಗಳು ಅಧ್ಯತೆ ವಹಿಸಲಿದ್ದಾರೆ. ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಉಗರಗೋಳ ನಿರ್ವಾಣೇಶ್ವರ ಮಠದ ಮಹಾಂತ ಸ್ವಾಮೀಜಿ, ಅರಳಿಕಟ್ಟಿ ತೋಟದಾರ್ಯ ಮಠದ ಶಿವಮೂರ್ತಿ ಸ್ವಾಮೀಜಿ, ಯಮಕನಮರ್ಡಿ ಹುಣಶಿಕೊಳ್ಳಮಠದ ಸಿದ್ದಬಸವ ದೇವರು, ಶಾಸಕ ಮಹಾಂತೇಶ ಕೌಜಲಗಿ, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತೇಶ ಶಾಸ್ತ್ರಿ ಆರಾದ್ರಿಮಠ, ವರ್ತಿ ಮಠದ ಶಂಕರ ದೇವರು, ಹುಣಶೀಕಟ್ಟಿಯ ಬಸವರಾಜ ದೇವರು, ಗೋಕಾಕದ ಬಸವಪ್ರಭು ದೇವರು ಇತರರು ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net