ಹೊಲದಲ್ಲಿ ಬೆಳೆದ 5.30 ಲಕ್ಷ ರೂ. ಮೌಲ್ಯದ ಗಾಂಜಾ ವಶ

IMG-20210302-WA0007
Published on

ವಿಜಯಪುರ : ಅಕ್ರಮವಾಗಿ ಹೊಲದಲ್ಲಿ ಬೆಳೆದ 5.30 ಲಕ್ಷ ರೂ. ಮೌಲ್ಯದ ಗಾಂಜಾವನ್ನು ಅಬಕಾರಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ರಾಮು ಲಕ್ಷ್ಮಣ ಗಗನಮಾಲಿ ತಮ್ಮ ಹೊಲದಲ್ಲಿ ಬೆಳೆದಿದ್ದ 315 ಹಸಿ ಗಾಂಜಾ ಹಾಗೂ 3 ಕೆಜಿ ಒಣ ಗಾಂಜಾ ಸೇರಿದಂತೆ ಒಟ್ಟು 53 ಕೆಜಿ ಗಾಂಜಾವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಆರೋಪಿ ಪರಾರಿಯಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅಬಕಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಬಕಾರಿ ಜಂಟಿ ಆಯುಕ್ತ ಡಾ.ವೈ.ಮಂಜುನಾಥ, ಅಬಕಾರಿ ಉಪ ಆಯುಕ್ತೆ ಸೈಯೀದ ಅಜ್ಮತ್ ಆಪ್ರೀನ್ ಹಾಗೂ ತಿಕೋಟಾ ತಹಸೀಲ್ದಾರ್ ಸಂತೋಷ ಮ್ಯಾಗೇರಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ ನೇತೃತ್ವದ ತಂಡ ದಾಳಿ ನಡೆಸಿ, ಗಾಂಜಾ ವಶ ಪಡೆದುಕೊಂಡಿದ್ದಾರೆ. ದಾಳಿಯಲ್ಲಿ ಅಬಕಾರಿ ಪಿಎಸ್‌ಐ ಪ್ರಕಾಶ ಜಾಧವ, ಪೇದೆಗಳಾದ ಆಶ್ರೀತ್, ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net