ಮಳೆಗಾಗಿ ಕತ್ತೆ ಮೆರವಣಿಗೆ

mkg
Published on

ಚನ್ನಗಿರಿ: ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ಮಂಗಳವಾರ ಕತ್ತೆಗೆ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು.

ಮಳೆ ಬಾರದ ಸಮಯದಲ್ಲಿ ಕತ್ತೆ ಪೂಜೆ ನಡೆಸಿ ಮೆರವಣಿಗೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಈ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಂದ ಕಾರಣ ಬಿತ್ತನೆ ಮಾಡಿದ ಬೆಳೆಗಳು ಕಮರುತ್ತಿವೆ. ಹಾಗಾಗಿ, ಗ್ರಾಮದ ದ್ವಾರಬಾಗಿಲ ಬಳಿ ಕತ್ತೆಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಪ್ರತಿ ಮನೆಗೆ ಕತ್ತೆಯನ್ನು ಕರೆದುಕೊಂಡು ಹೋಗಿ ಅವರು ನೀಡುವಂತ ಅಕ್ಕಿ ಪಡೆದು ಗ್ರಾಮದ ದೇವಸ್ಥಾನದ ಬಳಿ ಪ್ರಸಾದ ತಯಾರಿಸಿ, ಹಂಚಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಮಂಜಪ್ಪ, ಈ ಬಾರಿ ರೈತರು ಸಾಲಸೋಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದಾರೆ.

ದರೆ, ಮಳೆ ಸರಿಯಾದ ಸಮಯಕ್ಕೆ ಬಾರದೆ ಕೈಕೊಟ್ಟಿದೆ. ಆದ್ದರಿಂದ ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ನಾವು ಕತ್ತೆ ಮೆರವಣಿಗೆ ನಡೆಸುತ್ತಿದ್ದೇವೆ. ಇದರಿಂದ ಮಳೆ ಬರುವ ನಂಬಿಕೆ ಇದೆ ಎಂದರು.

ಗ್ರಾಮದ ಮುಖಂಡರಾದ ಸಂತೋಷ್, ತಾಪಂ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜುನಾಥ್, ಶೇಖರಪ್ಪ, ರಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net