ವೆಂಕಟದಾಸರ ಆರಾಧನೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ದಾಸ ಸಾಹಿತ್ಯ ಪ್ರತಿಷ್ಠಾನ ಹಾಗೂ ಮಾಧ್ಯಮ ಸಮಿತಿ ಆಶ್ರಯದಲ್ಲಿ ಬಾಗಲಕೋಟೆಯ ದಾಸವರೇಣ್ಯರಾದ ಶ್ರೀ ಪ್ರಸನ್ನ ವೆಂಕಟದಾಸರ ಆರಾಧನೆಯನ್ನು ಸೆ. 16ರಂದು ಸಂಜೆ 6.30ಕ್ಕೆ ಇಲ್ಲಿನ ದೇಸಾಯಿ ಗಲ್ಲಿ ಶ್ರೀ ವಿಠ್ಠಲ ಮಂದಿರದಲ್ಲಿ ಏರ್ಪಡಿಸಲಾಗಿದೆ. ಹುಬ್ಬಳ್ಳಿಯ ಡಾ. ಆರ್​.ಪಿ. ಕುಲಕರ್ಣಿ, ಅಶ್ವತ್ಥ ಆಚಾರ್ಯ ಕುಲಕರ್ಣಿ ಅವರ ಹರಿದಾಸ ವೈಭವದ ಜುಗಲಬಂದಿ ನಡೆಯಲಿದೆ ಎಂದು ಸಂಯೋಜಕ ಎನ್​.ಆರ್​. ಕುಲಕರ್ಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net