

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ದಾಸೋಹಕ್ಕೆ ಉಪಯೋಗಿಸಲು ಕಟ್ಟಿಗೆ ಒಡೆಯುವ ಯಂತ್ರ ಅಳವಡಿಸಿದ್ದು, ಸೋಮವಾರ ಪೂಜೆ ನೆರವೇರಿಸಲಾಯಿತು. ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ಕಾರ್ಯದರ್ಶಿ ಸರ್ವಮಂಗಳ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ವಿನಾಯಕ ಘೋಡ್ಕೆ, ಉದಯಕುಮಾರ ನಾಯಕ, ಶಾಮಾನಂದ ಪೂಜಾರಿ, ವ್ಯವಸ್ಥಾಪಕ ಈರಣ್ಣ ತ್ಪುಪದ ತರರು ಇದ್ದರು.