ಸ್ವರ್ಣವಲ್ಲೀ ಉಭಯ ಶ್ರೀಗಳ ಪಾದಪೂಜೆ

SIRSI PADA POOJE
Published on

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಅಧ್ಯಯನ ಮಾಡಿದ ಶಿಷ್ಯರೆಲ್ಲ ಸೇರಿ ಮಠದ ಉಭಯ ಶ್ರೀಗಳಾದ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ ಪಾದಪೂಜೆ ಭಾನುವಾರ ನಡೆಸಿದರು.

ಮಠದಲ್ಲಿ ಓದಿ ತಮ್ಮ ಜೀವನ ರೂಪಿಸಿಕೊಂಡ ಹಳೇ ವಿದ್ಯಾರ್ಥಿಗಳಿಂದ ಚಾತುರ್ವಸ್ಯದ ಸೇವೆ ನಡೆದಿದ್ದು ವಿಶೇಷವಾಗಿತ್ತು. ದೂರದೂರುಗಳಿಂದ ಶ್ರೀಮಠದ ಹಳೇ ವಿದ್ಯಾರ್ಥಿಗಳು ಆಗಮಿಸಿ ಉಭಯ ಶ್ರೀಗಳ ಪಾದುಕಾ ಪೂಜೆ ನಡೆಸಿ ಭಿಕ್ಷಾ ಸೇವೆ ಸಮರ್ಪಿಸಿದರು.

ವೇದ ಮಂತ್ರಗಳ ಪಠಣ, ಸ್ತೋತ್ರ ಪಠಣ, ಗಾಯತ್ರಿ ಜಪ, ವಿಷ್ಣು ಸಹಸ್ರನಾಮ ಪಾರಾಯಣಗಳನ್ನು ಮಾಡಿದರು.

ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಮಠದಲ್ಲೇ ತಮ್ಮ ವಿದ್ಯಾರ್ಥಿ ಜೀವನವನ್ನು ಪೂರೈಸಿ, ಶ್ರೀಮಠದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಶ್ರೀ ರಾಜರಾಜೇಶ್ವರೀ ಸಂಸ್ಕೃತ ಮಹಾಪಾಠ ಶಾಲೆಯ ಪ್ರಾಚಾರ್ಯರಾಗಿ ವಯೋನಿವೃತ್ತಿ ಹೊಂದಿದ ವಿ. ನರಸಿಂಹ ಭಟ್ ದಂಪತಿಯನ್ನು ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net