

ಮುಂಡರಗಿ: ಪಟ್ಟಣದ ರಾಮೇನಹಳ್ಳಿ ರಸ್ತೆಯ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧಾನೆ ಅಂಗವಾಗಿ ಶುಕ್ರವಾರ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬೆಳಗ್ಗೆ ವಿವಿಧ ಅಭಿಷೇಕ, ಅಲಂಕಾರ ಸೇವೆ, ಮಹಾ ನೈವೇದ್ಯ, ಮಹಾಮಂಗಳಾರತಿ ಮೊದಲಾದ ಪೂಜಾ ಕೈಂಕರ್ಯಗಳು ಜರುಗಿದವು. ಪ್ರಧಾನ ಅರ್ಚಕರಾದ ಗುರಾಚಾರ್ಯ ಕಳ್ಳಿ, ಅನಿಲಕುಮಾರ ನಂಜನಗೂಡ ಅವರು ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಮಠಕ್ಕೆ ಭಕ್ತರು ಆಗಮಿಸಿ ಗುರುರಾಯರ ದರ್ಶನ ಪಡೆದರು.
ಶ್ರೀರಾಘವೇಂದ್ರಸ್ವಾಮಿಗಳ ಮಠದ ಗೌರವ ವಿಚಾರಣಾಕರ್ತ ನಾರಾಯಣ ಇಲ್ಲೂರ, ಶಮಂತಕಮಣಿ ಇಲ್ಲೂರ, ರಘೋತ್ತಮ ಡಂಬಳ, ಎಚ್.ಆರ್. ಕೃಷ್ಣಮೂರ್ತಿ, ಕಟ್ಟೆಪ್ಪ ಆಚಾರ್ಯ, ವಿಜಯಲಕ್ಷ್ಮೀ ತಾವರಗೇರಿ, ಅರುಣಕುಮಾರ ಶಾನಬಾನ, ಸೋಮಶೇಖರ ಉಪ್ಪಿನಬೆಟಗೇರಿ, ದೇವಪ್ಪ ಇಟಗಿ, ನಾಗರಾಜ ಮುರಡಿ, ವೆಂಕಟೇಶ ಹೆಗ್ಗಡಾಳ, ಕಾಶಿಬಾಯಿ ದಮ್ಮೂರ, ಹೇಮಾ ಕುಲಕರ್ಣಿ, ನಾಗಮಣಿ ತಾವರಗೇರಿ, ವೀಣಾ ಪಾಟೀಲ, ದತ್ತಾತ್ರೇಯ ಹೆಗ್ಗಡಾಳ, ಸತ್ಯನಾರಾಯಣ ನಾರಾಯಣಕೇರಿ, ಪ್ರಶಾಂತಗೌಡ ಗುಡದಪ್ಪನವರ, ರಂಗಪ್ಪ ಕೋಳಿ, ಎ.ಎಸ್.ಮಕಾಂದಾರ, ಶಶಿಕಲಾ ಕುಕನೂರು, ಉಮಾ ಬಿ.ಎನ್., ಸುನೀತಾ ಅಳವಂಡಿ, ಕೆ.ಸುಭಾಷಿಣಿ, ಇತರರು ಇದ್ದರು.