ಬತ್ತಿಕೊಪ್ಪ ಗ್ರಾಮದಲ್ಲಿ ಶ್ರೀಗಳ ಪುಣ್ಯಾರಾಧನೆ

RTL
Published on

ರಟ್ಟಿಹಳ್ಳಿ: ತಾಲೂಕಿನ ಬತ್ತಿಕೊಪ್ಪ ಗ್ರಾಮದ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ಶ್ರೀಶೈಲ ಜಗದ್ಗುರು ಲಿಂ.ಶ್ರೀ ಉಮಾಪತಿ ಪಂಡಿತಾರಾಧ್ಯ ಮತ್ತು ಉಜ್ಜಯನಿ ಜಗದ್ಗುರು ಲಿಂ. ಶ್ರೀ ಮರಳುಸಿದ್ಧೇಶ್ವರ ಶ್ರೀಗಳ 16ನೇ ವರ್ಷದ ಪುಣ್ಯಾರಾಧನೆ ನೆರವೇರಿತು.

ವೇದಮೂರ್ತಿ ಕೊಟ್ರಯ್ಯಸ್ವಾಮಿ ಮಠ ವೈದಿಕತ್ವದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಗ್ರಾಮದ ಶ್ರೀಬಸವೇಶ್ವರ ಹಾಗೂಶ್ರೀ ದುರ್ಗಾದೇವಿ ಸಂಘದಿಂದ ಭಜನೆ ಕಾರ್ಯಕ್ರಮ ಜರುಗಿತು.

ಗ್ರಾಪಂ ಸದಸ್ಯರಾದ ಟಿ.ಸಿ. ಶಿವಪ್ಪನವರ, ಎಂ.ಎಂ. ಬಣಕಾರ, ಎಚ್.ಬಿ. ನಾಗೇನಹಳ್ಳಿ, ಗಣೇಶ ಹಾದ್ರಿಹಳ್ಳಿ, ಗ್ರಾಮಸ್ಥರಾದ ಡಿ.ಜಿ. ಈರಣ್ಣ ಬತ್ತಿಕೊಪ್ಪ, ಕುಮಾರ ಬಳಿಗಾರ, ನಾಗರಾಜ ಬೇವಿನಹಳ್ಳಿ, ರುದ್ರಗೌಡ ಕೆಂಚ್ಚಿಕೊಪ್ಪ, ಎನ್.ಜಿ.ದುರ್ಗದ, ಶಿವಲಿಂಗಪ್ಪ ಮಲೇಬೆನ್ನೂರು, ಕಲ್ಲಪ್ಪ ಕಲ್ಲದೇವರು, ಸುರೇಶ ಕರಿನಾಗಪ್ಪನವರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net