

ನವಲಗುಂದ: ಶ್ರೀಅಜಾತ ನಾಗಲಿಂಗ ಸ್ವಾಮೀಜಿಯವರ 143ನೇ ಆರಾಧನಾ ಮಹೋತ್ಸವದ ಅಗವಾಗಿ ಶ್ರೀಗಳ ಕೃರ್ತೃ ಗದ್ದುಗೆಗೆ ಪೀಠಾಧೀಶ ಶ್ರೀ ವೀರೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ರುದ್ರಾಭಿಷೇಕ ಹಾಗೂ ಅಲಂಕಾರ ನೆರವೇರಿಸಲಾಯಿತು. ಸುಮಾರು 5 ಕ್ವಿಂಟಾಲ್ ಮಾದಲಿಯಿಂದ ತಯಾರಿಸಿದ್ದ ಶ್ರೀನಾಗಲಿಂಗ ಮೂರ್ತಿಗೆ ಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿದ್ದಯ್ಯ ಸ್ವಾಮೀಜಿ, ನಾರಾಯಣ ನರಹರಿ, ನಾಗಲಿಂಗಪ್ಪ ಬಡಿಗೇರ, ನಾಗಲಿಂಗಪ್ಪ ಪತ್ತಾರ, ಎಂ.ಕೆ. ಮಹಿಂದ್ರಕರ ಮತ್ತಿತರು ಇದ್ದರು.