

ರೇವತಗಾಂವ: ಗ್ರಾಮದಲ್ಲಿ ಸಿಂಹಗಢ ಮಹಾರಾಜರ 55ನೇ ಪುಣ್ಯಾರಾಧನೆ ಸಂಭ್ರಮದಿಂದ ಜರುಗಿತು.
ಸೋಮವಾರ ರಾತ್ರಿ ಹಿರಿಯರ ಸಮ್ಮುಖದಲ್ಲಿ ವೀಣೆ ನಿಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು. ನಂತರ ಗ್ರಾಮದ ಕಲಾವಿದರಿಂದ ಮರಾಠಿ ಹಾಗೂ ಕನ್ನಡ ಭಜನೆ ನಡೆಯಿತು. ಹರಿ ಸಂಪ್ರದಾಯದಲ್ಲಿ ವೀಣೆಗೆ ಮಹತ್ತರ ಸ್ಥಾನವಿದೆ. ವೀಣಾಕಾರಿ, ವಾರಕಾರಿ, ಸಂತ ಸಾಂಪ್ರದಾಯಿಕರು ವೀಣೆಗೆ ಮಹತ್ವ ಸ್ಥಾನ ನೀಡುತ್ತಾರೆ ಎಂದು ಶಿಕ ಅರ್ಜುನ ಅಡಕೆ ತಿಳಿಸಿದರು.
ವೀಣೆ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ನುಡಿಸುವ ತಂತಿವಾದ್ಯದ ಹೆಸರಾಗಿದೆ. ವೀಣಾ ಎಂಬುದು ಬಲವಾದ ಮತ್ತು ಅರ್ಥಪೂರ್ಣವಾದ ಹೆಸರು ಮತ್ತು ಧಾರಕನು ಪ್ರತಿಭಾವಂತ, ಸೈಜನಶೀಲ ಮತ್ತು ಅಭಿವ್ಯಕ್ತೀಶಿಲ ವ್ಯಕ್ತಿ ಎಂದು ಸೂಚಿಸುತ್ತದೆ ಎನ್ನಲಾಗುತ್ತಿದೆ.