

ತಾಳಿಕೋಟೆ: ಪಟ್ಟಣದ ಗುರುರಾಜ ಭಜನಾ ಮಂಡಳಿ ವತಿಯಿಂದ ಪ್ರತಿವರ್ಷದಂತೆ ಗುರುವಾರ ನಗರೇಶ್ವರ ದೇವಾಲಯದಲ್ಲಿ ಗುರು ರಾಘವೇಂದ್ರ ಮಹಾಸ್ವಾಮಿಗಳ 49ನೇ ಆರಾಧನಾ ಮಹೋತ್ಸವ ಭಕ್ತಿಭಾವದೊಂದಿಗೆ ಜರುಗಿತು.
ಪೂರ್ವಾರಾಧನೆ ನಿಮಿತ್ತ ಗುರುವಾರ ನಸುಕಿನ ಜಾವ 5 ಗಂಟೆಯಿಂದ 6 ಗಂಟೆಯವರೆಗೆ ಸುಪ್ರಭಾತ, 7 ಗಂಟೆಯಿಂದ 8 ಗಂಟೆಯವರೆಗೆ ನಗರೇಶ್ವರ ರುದ್ರಾಭಿಷೇಕ, ಅಲಂಕಾರ ಅರ್ಚನೆ ಜರುಗಿತು. 8 ಗಂಟೆಯಿಂದ 10 ಗಂಟೆಯವರೆಗೆ ಗುರುರಾಯರ ಅಷ್ಟೋತ್ತರ ನವಗ್ರಹ ಹೋಮ, ಮಧ್ಯಾಹ್ನ 1 ಗಂಟೆಯಿಂದ ಕನಕಾಭಿಷೇಕ, ತುಳಸಿ ಅರ್ಚನೆ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ, ಪ್ರಸಾದ, ಸಂಜೆ 7 ಗಂಟೆಯಿಂದ ತಾರತಮ್ಯ ಭಜನೆಯೊಂದಿಗೆ ಪಲ್ಲಕ್ಕಿ ಸೇವೆ, ಮಂತ್ರಪುಷ್ಪ ಜರುಗಿತು.
ಪೂಜಾ ಕಾರ್ಯಕ್ರಮವನ್ನು ವೇ.ಶ್ರೀಧರಭಟ್ ಜೋಶಿ, ವೇ.ರಮೇಶ ಅಚಾರ್ಯ, ವೇ.ಶ್ರೀಧರಾಚಾರ್ಯ, ವೇ.ವೆಂಕಣ್ಣಾಚಾರ್ಯ, ವೇ.ಸಂಜೀವಾಚಾರ್ಯ ಗ್ರಾಮಪುರೋಹಿತ, ವೇ.ಗುಂಡಭಟ್ ಜೋಶಿ, ವೇ.ಪ್ರಭಾಕರಾಚಾರ್ಯ ಜೋಶಿ, ಅಕ್ಷಯ ಜೋಶಿ, ಅಭಿಷೇಕ ಜೋಶಿ, ಪ್ರತೀಕ್ಷಾ ಜೋಶಿ, ಜಯತೀರ್ಥ ಆಚಾರ್ಯ, ಲಿಂಗೋಜಿರಾವ್ ಕಾಮನಟಗಿ, ಶ್ರೀನಿವಾಸಆಚಾರ್ಯ ಜೋಶಿ ಇತರರು ನೆರವೇರಿಸಿದರು.
ಮುಖಂಡರಾದ ವಾಸುದೇವ ಹೆಬಸೂರ, ದತ್ತಾತ್ರೇಯ ಹೆಬಸೂರ, ಕೃಷ್ಣಾ ಮಾನ್ವಿ, ಡಾ.ಎಲ್.ಎನ್.ಶೆಟ್ಟಿ, ಅರುಣ ಕನಕಗಿರಿ, ವಾಸುದೇವ ಮಾನ್ವಿ, ಯಂಕಣ್ಣ ತಾಳಪಲ್ಲೆ, ರವಿ ತಾಳಪಲ್ಲೆ, ಸತ್ಯನಾರಾಯಣ ತಾಳಪಲ್ಲೆ, ಭೀಮ ಅಗಡಿ, ಹಣಮಂತ ಮಾನ್ವಿ, ಪ್ರಲ್ಹಾದ ಮಾನ್ವಿ, ಮಂಜು ಶೆಟ್ಟಿ, ವಾಸು ಮಾನ್ವಿ, ಶ್ರೀಗುರು ಮಾನ್ವಿ, ಗುರುರಾಜ ತಾಳಪಲ್ಲೆ, ವಿದ್ಯಾಧರ ಗೊಟಗುಣಕಿ, ಕೃಷ್ಣಾ ತಾಳಪಲ್ಲೆ, ವೆಂಕಟೇಶ ತಾಳಪಲ್ಲೆ, ವೆಂಕಯ್ಯ ತಾಳಪಲ್ಲೆ, ಅಶೋಕ ಶೆಟ್ಟಿ, ಕೃಷ್ಣಾ ಶೆಟ್ಟಿ, ಶ್ರೀಕಾಂತ ಶೆಟ್ಟಿ, ಗೋವಿಂದ ಶೆಟ್ಟಿ, ಸತ್ಯನಾರಾಯಣ ಕನಕಗಿರಿ, ಪ್ರಶಾಂತ ಜನಾದ್ರಿ, ರಾಘವೇಂದ್ರ ತಾಳಪಲ್ಲೆ ಇತರರಿದ್ದರು.