ರಾಘವೇಂದ್ರ ಸ್ವಾಮಿಗಳ ಆರಾಧನೆ 20ರಿಂದ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಯಾಲಕ್ಕಿಶೆಟ್ಟರ್​ ಕಾಲನಿ ಪುರಂದರ ಮಂಟಪದಲ್ಲಿ ಆ. 20ರಿಂದ 22ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಏರ್ಪಡಿಸಲಾಗಿದೆ.
ಆರಾಧನಾ ಉತ್ಸವ ನಿಮಿತ್ತ ಆ. 19ರಂದು ಸಂಜೆ 6 ಗಂಟೆಗೆ ಶಾಕೋತ್ಸವ, ಧಾನ್ಯ ಪೂಜೆ, ಧ್ವಜಾರೋಹಣ, ಗೋಪೂಜೆ ನಡೆಸಲಾಗುವುದು. ಆ. 20ರಂದು ಪೂರ್ವಾರಾಧನೆ, ಆ. 21ರಂದು ಮಧ್ಯಾರಾಧನೆ ಹಾಗೂ ಆ. 22ರಂದು ಉತ್ತರಾಧನೆ ಉತ್ಸವ ನಡೆಯಲಿದೆ.
ರಾಯರಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಅಷ್ಟೋತ್ತರ ಪಾರಾಯಣ, ವಿವಿಧ ಮಂಡಳಿಗಳಿಂದ ಭಜನೆ ಹಾಗೂ ಮಧ್ಯಾರಾಧನೆ ದಿನದಂದು 1,25,000 ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟಾಕ್ಷರ ಜಪ, ಶ್ರೀಧರ ರಾವ್​ ಅವರಿಂದ ಸಂಗೀತ ಸೇವೆ ನಡೆಯಲಿದೆ. ಪಂ. ಜಿ.ವಿ ನವಲಗುಂದ, ಶ್ರೀನಿವಾಸ ನವಲಗುಂದ, ಅಚ್ಯುತರಾವ್​ ಬಿಡಿಕರ್​ ಹಾಗೂ ಬಂಡಾಚಾರ್​ ಗಿಡದ ಹುಬ್ಬಳ್ಳಿ ಅವರಿಂದ ಪ್ರವಚನ, ಉತ್ತರಾರಾಧನೆ ದಿನದಂದು ಪ್ರಹ್ಲಾದ ರಾಜರ ರಥೋತ್ಸವ ಹಾಗೂ ಸಾಮೂಹಿಕ ಶ್ರೀನಿವಾಸ ಕಲ್ಯಾಣ ಉತ್ಸವಗಳನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net