ರಾಘವೇಂದ್ರ ಸ್ವಾಮಿಗಳ ಆರಾಧನೆ 10 ರಿಂದ

Guru raghvendra vvani
Published on

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ. 10ರಿಂದ 3 ದಿನಗಳ ಕಾಲ 305ನೇ ರಾಯರ ಆರಾಧನಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ತಿಳಿಸಿದ್ದಾರೆ. ಪ್ರಕಟಣೆ ನೀಡಿರುವ ಅವರು, ಮಠದಲ್ಲಿ ನಿತ್ಯ ಶ್ರೀ ರಾಘವೇಂದ್ರ ಸ್ತೋತ್ತ್ರ, ಅಷ್ಟೋತ್ತರ, ಅಭಿಷೇಕ, ವಿಶೇಷ ಅಲಂಕಾರ, ಪುರಾಣ-ಪ್ರವಚನ, ಪಾರಾಯಣ, ಸಂಗೀತ ಸೇವೆ ನಡೆಯಲಿದೆ. ಆ. 12ರಂದು ಬೆಳಗ್ಗೆ 10ಕ್ಕೆ ಸಕಲ ವಾದ್ಯವೈಭವ, ಭಜನೆ, ರಥೋತ್ಸವ ನೆರವೇರಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net