

ಹುಬ್ಬಳ್ಳಿ: ಇಲ್ಲಿಯ ಆನಂದ ನಗರದ ಮುಖ್ಯ ರಸ್ತೆಯ ನಾಗಲಿಂಗ ನಗರದಲ್ಲಿ ಶ್ರೀ ಅಜಾತ ಜಗದ್ಗುರು ನಾಗಲಿಂಗ ಸ್ವಾಮೀಜಿಗಳ 43ನೇ ಹಾಗೂ ಮಾತೋಶ್ರೀ ಸಾವಿತ್ರಮ್ಮನ್ನವರ ಪುಣ್ಯಾರಾಧನೆ ಕಾರ್ಯಕ್ರಮ ಬುಧವಾರ ನಡೆಯಿತು. ಉಪ ಮಹಾಪೌರ ದುರ್ಗಮ್ಮ ಬಿಜವಾಡ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ಪುಷ್ಪಾರ್ಚನೆ ಮಾಡಿದರು. ನಗರದ ಅಧ್ಯಕ್ಷ ಅನಿಲ ದೇಶಪಾಂಡೆ, ಪ್ರಮುಖರಾ ದೀಪಕ ಜಿತೂರಿ, ಶಿವಬಸಪ್ಪ ಗಚ್ಚಿನವರ, ಶಶಿಕಾಂತ ಬಿಜವಾಡ, ಭೀಮಪ್ಪ ಗಾಳೆಪ್ಪನವರ, ಮುಕುನಗೌಡ ಗುಗ್ಗರಿ, ಅಕ್ಕಮಹಾದೇವಿ ಬಾಗೇವಾಡಿ, ಸಂಗೀತಾ ಬದ್ದಿ ಇತರರಿದ್ದರು.