

ನಾಲವಾರ: ಕುಂಬಾರಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಸಹ ಶಿಕ್ಷಕಿ ಪ್ರೀತಿ ಬೆಳಗುಂಪಾ ನಾಡದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖ್ಯಗುರು ಶಿವಜಾತ ನಡಗೇರಿ ಧ್ವಜಾರೋಹಣ ನೆರವೇರಿಸಿದರು. ಪ್ರಮುಖರಾದ ವೆಂಕಟೇಶ ದುರ್ಗದ, ಮಲ್ಲಿಕಾರ್ಜುನ ಬಡಿಗೇರ, ಬಸವರಾಜ ಅಣಬಿ, ವೆಂಕಟರೆಡ್ಡಿ ಬಂದಳ್ಳಿ, ಪವನಕುಮಾರ, ನೀಲಮ್ಮ ಇತರರಿದ್ದರು.