ಕಾವೇರಿ ಮಾತೆಗೆ ಹುಣ್ಣಿಗೆ ಪೂಜೆ

Kaveri pooje
ಹುಣ್ಣಿಮೆಯ ಪ್ರಯುಕ್ತ ಕಾವೇರಿ ಮಾತೆಗೆ ವಿಶೇಷ ಪೂಜೆ ನಡೆಸಲಾಯಿತು.
Published on

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಿ.ಎಂ.ರಸ್ತೆ ಸಮೀಪವಿರುವ ಕಾವೇರಿ ಪ್ರತಿಮೆಗೆ 152ನೇ ಹುಣ್ಣಿಮೆಯ ಪ್ರಯುಕ್ತ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಬೆಬೀಂದ್ರ ಪ್ರಸಾದ್ ಸಮ್ಮುಖದಲ್ಲಿ ಪೂಜಾ ಸೇವಾರ್ಥದಾರರಾದ ಕುಶಾಲನಗರದ ಭಾವನಾ ಅಯ್ಯಪ್ಪ ಹಾಗೂ ಚಿದ್ರೋಪ ಸಿದ್ವಾನ ಸಮ್ಮುಖದಲ್ಲಿ ಅರ್ಚಕ ಪ್ರಸನ್ನ ಭಟ್ ಕಾವೇರಿ ನದಿಯಿಂದ ನೀರು ತಂದು ಕಾವೇರಿ ಮಾತೆಗೆ ಸ್ವಚ್ಛಗೊಳಿಸಿ ಹಾಲು ಜೇನು, ತುಪ್ಪ ಎಳನೀರಿನಿಂದ ನೈವೇದ್ಯ ಮಾಡಿದರು. ಹೊಸ ಸೀರೆ, ಕುಪ್ಪಸ ಹಾಗೂ ಒಡವೆಗಳನ್ನು ತೊಡಿಸಿ, ವಿವಿಧ ಹೂ ಹಾರಗಳಿಂದ ಅಲಂಕರಿಸಿ ಎಡೆ ನೈವೇದ್ಯ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಸಂಘದ ಸದಸ್ಯರಾದ ರವೀಂದ್ರ ಪ್ರಸಾದ್,ವಿಜೇಂದ್ರ ಪ್ರಸಾದ್, ರುದ್ರೇಶ್, ಭಕ್ತರಾದ ಮಂಜು, ತಿಲಕ್ ಪೂಜಾರಿ, ದೀಪಕ್ ಪೂಜಾರಿ, ಆವೃತ್ತಿ ಮಂಜು, ಉಮೇಶ್, ಕುಮಾರ್, ಚಂದ್ರು, ಕೊಪ್ಪ ಚಂದ್ರು, ಬೀರೇಗೌಡ, ಮಹಿಳೆಯರು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net