ಲಿಂ.ಕುಮಾರೇಶ್ವರರ ಆರಾಧನೆ ನಮ್ಮೆಲ್ಲರ ಕರ್ತವ್ಯ

HNL Satstala
Published on

ಹಾನಗಲ್ಲ: ವೀರಶೈವ ಲಿಂಗಾಯತ ಸಮಾಜಕ್ಕೆ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರಗಳು ಧರ್ಮ ಪದ್ಧತಿಗಳಾಗಿವೆ. ಷಟ್‌ಸ್ಥಲ ಧ್ವಜಾರೋಹಣದ ಮೂಲಕ ಲಿಂ.ಕುಮಾರ ಶಿವಯೋಗಿಗಳ ಆರಾಧನೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದು ಅಕ್ಕಿಆಲೂರಿನ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಪಟ್ಟಣದ ವಿರಕ್ತಮಠದ ಆವರಣದಲ್ಲಿ ಮಂಗಳವಾರ ಲಿಂ.ಕುಮಾರ ಶಿವಯೋಗಿಗಳ 95ನೇ ಪುಣ್ಯ ಸ್ಮರಣೋತ್ಸವದ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಮಾಜಕ್ಕೆ ಧಾರ್ಮಿಕ ದಿಕ್ಕನ್ನು ತೋರಿದ ಮಹಾಪುರುಷ ಕುಮಾರ ಶಿವಯೋಗಿಗಳು. ಅಂತಹ ಪುಣ್ಯ ಭೂಮಿಯಲ್ಲಿ ಜನಿಸಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ವೀರಶೈವ ಮಹಾಸಭೆ ಸ್ಥಾಪನೆ ಮೂಲಕ ಸಮಾಜದಲ್ಲಿ ಧಾರ್ಮಿಕ ಕ್ರಾಂತಿಯನ್ನು ಮಾಡಿದವರು. ಲಿಂ.ಕುಮಾರೇಶ್ವರರ ಆರಾಧನೆ ನಮ್ಮೆಲ್ಲರ ಆದ್ಯ ಕರ್ತವ್ಯ. ಕುಮಾರ ಶಿವಯೋಗಿಗಳ ಜೀವನ ಕ್ರಮವೇ ನಮಗೊಂದು ಪಾಠವಾಗಿದೆ ಎಂದರು.

ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಸ್ವಾಮಿಗಳು, ಬಿಜಕಲ್ ಶಿವಲಿಂಗ ಸ್ವಾಮಿಗಳು, ಬಾಳೂರಿನ ಕುಮಾರ ಮಹಾಸ್ವಾಮಿಗಳು, ಎ.ಎಸ್.ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ, ಚನ್ನವೀರಸ್ವಾಮಿ ಹಿರೇಮಠ, ದಾನಪ್ಪ ಸಿಂಧೂರ, ಶಿವಯೋಗಿ ಸವದತ್ತಿ, ಶಿವಯೋಗಿ ಅರಳೇಲಿಮಠ, ಎನ್. ಸದಾಶಿವಪ್ಪ, ಬಸವರಾಜ ಯಲಿ, ಸಿ.ಎಸ್. ವಸ್ತ್ರದ, ಮಹೇಶ ಕಬ್ಬೂರ, ವೀರೇಶ ಹುಗ್ಗಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net