

ಕೊಳ್ಳೇಗಾಲ: ನರಕ ಚತುರ್ದಶಿ ಪ್ರಯುಕ್ತ ಪಟ್ಟಣದ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಕಾಳಿಂಗ ಮರ್ದನ ಶ್ರೀ ಕೃಷ್ಣ ದೇವರಿಗೆ ವಿಶೇಷ ಪೂಜೆ ನೆರವೇರಿತು.
ಮುಂಜಾನೆ ಶ್ರೀ ಕೃಷ್ಣ ದೇವರಿಗೆ ಎಣ್ಣೆ ಮಜ್ಜನ, ಪಂಚಾಮೃತ ಅಭಿಷೇಕ, ನೂತನ ವಸ್ತ್ರಧಾರಣೆ, ನೈವೇದ್ಯ, ಅಷ್ಟೋತ್ತರ, ಮಹಾ ಮಂಗಳಾರತಿ ಮಾಡಿದ ಬಳಿಕ ಭಕ್ತರಿಗೆ ಪ್ರಸಾದ ನೀಡಲಾಯಿತು. ದೇವಾಲಯದ ಎಲ್ಲ ಪೂಜೆ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ಶೇಷಾದ್ರಿ ಭಟ್ಟರು, ಸುದರ್ಶನ್ ಭಟ್ಟ ನೆರವೇರಿಸಿದರು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಜನರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.