ಹಿರಿಯ ಜಗದ್ಗುರುಗಳಿಂದ ಶ್ರೀಕೃಷ್ಣನಿಗೆ ಪೂಜೆ

sro
ಶೃಂಗೇರಿ ಮಠದ ಗುರುನಿವಾಸದಲ್ಲಿ ಹಿರಿಯ ಜಗದ್ಗುರುಗಳು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದರು.
Published on

ಶೃಂಗೇರಿ: ಗೋಕುಲಾಷ್ಟಮಿ ಪ್ರಯುಕ್ತ ಶೃಂಗೇರಿ ಶ್ರೀ ರಾಜಗೋಪಾಲ ದೇವಸ್ಥಾನವನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಕ್ತರು ದೇವಾಲಯಕ್ಕೆ ಆಗಮಿಸಿ ಹಣ್ಣುಕಾಯಿ, ಪುಷ್ಪ ಸಮರ್ಪಿಸಿ ಪೂಜೆ ಸಲ್ಲಿಸಿದರು. ಮಠದ ಆವರಣದ ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಸಹಸ್ರ ಕಮಲಾರ್ಚನೆ ನೆರವೇರಿತು. ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಶ್ರೀಕಷ್ಣನಿಗೆ ತುಳಸಿದಳ, ವಿವಿಧ ಪುಷ್ಪ್ಪಗಳನ್ನು ಸಮರ್ಪಿಸಿ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net