ಜನಾರ್ಧನ ಸ್ವಾಮಿಗಳ ಆರಾಧನೆ

Worship of Lord Janardhana
ಚಿಕ್ಕಶೇಲ್ಲಿಕೇರಿಯಲ್ಲಿ ಜನಾರ್ಥನಸ್ವಾಮಿಗಳ ಆರಾಧನೆಯ ಅಂಗವಾಗಿ ನಡೆದ ಗೋಪಾಳಕಾಲದಲ್ಲಿ ಪಾಲ್ಗೊಂಡಿರುವ ಭಕ್ತ ಸಮೂಹ.
Published on

ಕಲಾದಗಿ: ಸಮೀಪದ ಚಿಕ್ಕಶೇಲ್ಲಿಕೇರಿಯಲ್ಲಿ ಎರಡು ದಿನಗಳಿಂದ ಜರುಗುತ್ತಿರುವ ಜನಾರ್ಧನಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಪಲ್ಲಕ್ಕಿ ಮಹೋತ್ಸವ ಹಾಗೂ ಗೋಪಾಳಕಾವಲಿ ಸಂಭ್ರಮದಿಂದ ನಡೆದವು.

ಸತ್ಪುರುಷ ಜನಾರ್ಧನ ಮಹಾಸ್ವಾಮಿಗಳ ಸ್ಮರಣೆಯಾಗಿ ಗ್ರಾಮದ ಹೊರಭಾಗದಲ್ಲಿರುವ ಜನಾರ್ಧಸ್ವಾಮಿ ಮಠದಲ್ಲಿ ಹಾಗೂ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಪಲ್ಲಕ್ಕಿ ಮಹೋತ್ಸವ, ಬುತ್ತಿಪೂಜಾ, ಗೋಪಾಳ ಕಾಲ ಮತ್ತು ಅವಭೃತ ಸ್ನಾನ ಹಾಗೂ ಅನ್ನಸಂತರ್ಪಣೆಗಳಲ್ಲಿ ಭಕ್ತರು ಪಾಲ್ಗೊಂಡರು. ಮಾ. 1ರಂದು ವಿನಾಯಕ ಶಾಂತಿಯೊಂದಿಗೆ ಆರಾಧನಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net