

ಆಯನೂರು: ಹೊಸೂರು ತಪೋವನ ವಾದಿರಾಜಾಶ್ರಮದಲ್ಲಿ 3 ದಿನಗಳ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮೊದಲ ದಿನದ ಪೂರ್ವಾರಾಧನೆ ಅಂಗವಾಗಿ ಗುರುವಾರ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ಹರಿವಾಯುಸ್ತುತಿ, ರಾಘವೇಂದ್ರ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಸರ್ವಸೇವೆ, ತೀರ್ಥಪ್ರಸಾದ, ದೇವರನಾಮಗಳು, ಪಲ್ಲಕ್ಕಿ ಉತ್ಸವ ಮತ್ತು ಮಹಾಮಂಗಳಾರತಿ ನೆರವೇರಿತು. ರಾಘವೇಂದ್ರ ವೇದಿಕೆಯಲ್ಲಿ ಮಹಿಳಾ ತಂಡದವರು ಕೀರ್ತನೆಗಳನ್ನು ಹಾಡಿದರು. ರಾಘವೇಂದ್ರ ಸೇವಾ ಸಮಿತಿಯ ಅಧ್ಯಕ್ಷ ಅಚ್ಚುತರಾವ್, ಸೆಕ್ರೇಟರಿ ಯದುನಾಥರಾವ್, ಟ್ರಸ್ಟಿಗಳಾದ ಮಧುಸೂದನರಾವ್, ಶೇಷಗಿರಿರಾವ್, ಕೃಷ್ಣಮೂರ್ತಿ, ಆನಂದರಾವ್, ನಾಗರಾಜ್ ರಾವ್, ವಿಜಯಧ್ವಜ್, ವಿಜಯ ವಿಠಲರಾವ್, ಗ್ರಾಮಸ್ಥರು ಇದ್ದರು.