ರಘುವರ್ಯ ತೀರ್ಥರ ಉತ್ತರಾರಾಧನೆ ಸಂಪನ್ನ

UTTARARADHANE
ಗಂಗಾವತಿ ತಾಲೂಕಿನ ಆನೆಗೊಂದಿ ಐತಿಹಾಸಿಕ ನವವೃಂದಾವನಗಡ್ಡಿಯಲ್ಲಿ ಶ್ರೀ ರಘುವರ್ಯ ತೀರ್ಥರ ಉತ್ತರಾರಾಧನೆ ನಿಮಿತ್ತ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು ಪಂಚಾಮೃತ ಅಭಿಷೇಕ ಭಾನುವಾರ ನೆರವೇರಿಸಿದರು.
Published on

ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ನವವೃಂದಾವನಗಡ್ಡಿಯಲ್ಲಿ ಶ್ರೀ ರಘುವರ್ಯ ತೀರ್ಥರ ಉತ್ತರಾರಾಧನೆ ಭಾನುವಾರ ಸಂಪನ್ನಗೊಂಡಿತು.

ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಮೂಲ ವೃಂದಾವನಕ್ಕೆ ಮಹಾಪಂಚಾಮತ ಅಭಿಷೇಕ, ಸಂಸ್ಥಾನ ಪೂಜೆ, ನ್ಯಾಯಸುಧಾ ಪಾಠ, ಭಕ್ತರಿಗೆ ತಪ್ತ ಮುದ್ರಾಧಾರಣೆ, ಯತಿಗಳಿಗೆ ಹಸ್ತೋದಕ, ಭಕ್ತರಿಗೆ ತೀರ್ಥ, ಪ್ರಸಾದ ವಿನಿಯೋಗ, ಸಮಸ್ತ ಭಕ್ತರಿಗೆ ಲಮಂತ್ರಾಕ್ಷತೆ ಮತ್ತು ಶ್ರೀಗಳಿಂದ ಅನುಗ್ರಹ ಸಂದೇಶ ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.

ಮುಖಂಡರಾದ ಗಲಗಲಿ ಪ್ರಹ್ಲಾದಾಚಾರ್ಯ, ಮಹಿಷಿ ಆನಂದಾಚಾರ್ಯ, ವಾದಿರಾಜಾಚಾರ್ಯ, ಉಮರ್ಜಿ ರಾಮಾಚಾರ್ಯ, ಬಳ್ಳಾರಿ ರಾಘವೇಂದ್ರಾಚಾರ್ಯ, ಜೀತೇಂದ್ರಾಚಾರ್ಯ ಜೋಶಿ, ಸತ್ಯ ಬೋಧಾಚಾರ್ಯ ರಟ್ಟಿಹಳ್ಳಿ, ಪ್ರಸನ್ನಾಚಾರ್ಯ ಕಟ್ಟಿ, ಕಷ್ಣಮೂರ್ತಿ ಆಚಾರ್ಯ ಮಹಿಶಿ, ವಿಷ್ಣುತೀರ್ಥ ಆಚಾರ್ಯ ಜೋಶಿ, ಕಾರ್ತಿಕ್ ಆಚಾರ್ಯ ಪಂಡರಪುರ, ಹುಲಿಗಿ ನಾರಾಯಣ ಆಚಾರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net