

ಮಧೂರು: ಉಳಿಯ ಧನ್ವಂತರಿ ಸನ್ನಿಧಿಯಲ್ಲಿ ಧನ್ವಂತರಿ ಜಯಂತಿ ಆಚರಣೆ, ಉಳಿಯತ್ತಾಯ ವಿಷ್ಣು ಆಸ್ರ ಮುಂದಾಳತ್ವದಲ್ಲಿ ಮಂಗಳವಾರ ನಡೆಯಿತು.
ಬೆಳಗ್ಗೆ ಗಣಪತಿ ಹವನ, ಧನ್ವಂತರಿ ಹವನ, ದೇವರಿಗೆ ಪವಮಾನ ಅಭಿಷೇಕ ಹಾಗೂ ವಿಶೇಷ ಪೂಜೆ ಜರುಗಿತು. ಕಾಸರಗೋಡು ಪದ್ಮಪ್ರಿಯಾ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ಹಾಗೂ ಜಿಲ್ಲೆಯ ಮೇರು ಕಲಾವಿದರ ಕೂಡುವಿಕೆಯಿಂದ ಭೃಗು ಶಾಪ ತಾಳಮದ್ದಳೆ ಕೂಟ ನಡೆಯಿತು.
ಮಧ್ಯಾಹ್ನ 2ರಿಂದ ಉಳಿಯ ಧನ್ವಂತರಿ ಯಕ್ಷಗಾನ ಸಂಘದ ಸದಸ್ಯರಿಂದ ಮಾನಿಷಾದ ಯಕ್ಷಗಾನ ತಾಳಮದ್ದಳೆ ಜರುಗಿತು. ಸಂಜೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಗಮಿಸಿ ಆಶೀರ್ವದಿಸಿದರು. ರಾತ್ರಿ ಶ್ರೀದೇವರಿಗೆ ವಿಶೇಷ ಕಾರ್ತಿಕ ಪೂಜೆ ನೆರವೇರಿತು.