

ಸೋಮವಾರಪೇಟೆ: ವಾಹನ ಚಾಲಕರು ಮತ್ತು ಮಾಲೀಕರ ಸಂಘದ ನಿಲ್ದಾಣದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದ ಪ್ರಯುಕ್ತ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಸಂಚಾಲಕ ರೋಹಿತ್ ಪೂಜಾರಿ ಮಾತನಾಡಿ, ಆಷಾಢ ಮಾಸದ ಪೂಜೆಯನ್ನು ಕಳೆದ ಮೂರು ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಸಾರ್ವಜನಿಕರಿಗೆ ಅನ್ನದಾನ ನಡೆಸಲಾಗಿದೆ ಎಂದರು.
ಅರ್ಚಕ ನಿತಿನ್, ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಾಲಕೃಷ್ಣ , ಪೂಜಾರಿ ವಾಹನ ಚಾಲಕರಾದ ಕೆ.ಎನ್.ದೀಪಕ್, ವಸಂತ, ಸಿ.ಸಿ. ನಂದ, ದಾಮೋದರ್ ಸೇರಿದಂತೆ ಹಲವರು ಇದ್ದರು.