

ಗೊಳಸಂಗಿ: ಗ್ರಾಮದಲ್ಲಿ ಕಾರಹುಣ್ಣಿಮೆ ನಿಮಿತ್ತ ಬುಧವಾರ ರೈತರು ಎತ್ತುಗಳ ಕರಿಹರಿದು ಸಂಭ್ರಮಿಸಿದರು.
ಬೆಳಗ್ಗೆಯಿಂದಲೇ ರೈತರು ತಮ್ಮ ಎತ್ತುಗಳ ಮೈತೊಳೆದು, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ವಿಶೇಷವಾಗಿ ಪೂಜೆ ಸಲ್ಲಿಸಿದರು. ಸಂಜೆ ಗ್ರಾಮದ ಬಂಗಲೆ ಓಣಿಯಲ್ಲಿ ಸಂಪ್ರದಾಯದಂತೆ ಆಯ್ದ ಮನೆತನಗಳ ಎತ್ತುಗಳನ್ನು ಬರಮಾಡಿಕೊಂಡು ಅಗಸಿಯಲ್ಲಿ ಎತ್ತುಗಳಿಗೆ ಆರತಿ ಮಾಡಿ ಕರಿ ಹರಿಯಲಾಯಿತು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಸೇರಿದ್ದ ಜನಸ್ತೋಮದ ನಡುವೆ ಬಿಳಿ ಎತ್ತು ಕರಿ ಹರಿಯಿತು. ಗ್ರಾಪಂ ಅಧ್ಯಕ್ಷ ರಾವುತ ಸೀಮಿಕೇರಿ, ಪ್ರಮುಖರಾದ ತಜಮುಲಖಾದ್ರಿಸಾಹೇಬ ಜಾಗೀರದಾರ, ಶಂಕರಗೌಡ ಪಾಟೀಲ, ಕೇಶವ ಪವಾರ, ಸಂಗಪ್ಪ ಕೋಲಾರ, ಸಿದ್ದು ಸಾಳುಂಕೆ, ಗಜೇಂಡಪ್ಪ ಪರಮಗೊಂಡ, ಕೆಂಚಪ್ಪ ತಳವಾರ, ಗೌಸಪೀರಾ ಜಾಗೀರದಾರ, ಅಮರೇಶಗೌಡ ಪಾಟೀಲ, ಹುಸನಪ್ಪ ಚಿಮ್ಮಲಗಿ, ಬಸಪ್ಪ ಸುರಪುರ ಇತರರಿದ್ದರು.