ಮನೆ, ಮನೆಗಳಲ್ಲಿ ವಿಘ್ನ ನಿವಾರಕನ ಪೂಜೆ

Ganesha pooja
Published on

ಕಾರವಾರ:ಜಿಲ್ಲೆಯ ಮನೆ, ಮನೆಗಳಲ್ಲಿ ವಿಘ್ನ ನಿವಾರಕನ ಪೂಜೆ ನಡೆಸಿ, ಬುಧವಾರ ವಿಸರ್ಜಿಸಲಾಯಿತು.

ಕೆಲವೆಡೆ ಸೋಮವಾರ, ಹಲವೆಡೆ ಮಂಗಳವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಶ್ರದ್ಧೆ, ಭಕ್ತಿ, ವಿಜೃಂಭಣೆಯಿಂದ ಜರುಗಿತು.
ಮಣ್ಣಿನ ಗಣೇಶ ಮೂರ್ತಿಗಳನ್ನು ಕರೆಸಿ ಸಾವಿರಾರು ಮನೆಗಳಲ್ಲಿ ಪೂಜೆ ಸಲ್ಲಿಸಲಾಯಿತು.

ಹೆಚ್ಚಿನ ಮನೆಗಳಲ್ಲಿ ಬುಧವಾರ ರಾತ್ರಿ ಗಣಪನ ವಿಸರ್ಜನೆ ನಡೆಯಿತು. ಕಾರವಾರದಲ್ಲಿ ನಿರಂತರವಾಗಿ ಸುರಿದ ಮಳೆ ಗಣಪತಿ ವಿಸರ್ಜನೆಗೆ ಅಡ್ಡಿ ಉಂಟುಮಾಡಿತು.

ಸಾರ್ವಜನಿಕ ಗಣೇಶೋತ್ಸವ:

1300 ಕ್ಕೂ ಹೆಚ್ಚು ಕಡೆ ಸಾರ್ವಜನಿಕ ಗಣೇಶೋತ್ಸವ ನಡೆಯಿತು. ಗಣಪತಿ ದೇವಸ್ಥಾನಗಳಲ್ಲಿ ವಿಶೆಷ ಪೂಜೆ ಜರುಗಿತು.
ಮೋದಕ, ಪಂಚಕಜ್ಜಾಯ, ಚಕ್ಕುಲಿ, ಉಂಡೆ ಮುಂತಾದ ಭಕ್ಷ್ಯಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡಿ, ಪರಸ್ಪರ ಹಂಚಲಾಯಿತು.

ಮೋದಕ ಪ್ರಸಾದ
ಕಾರವಾರ ನಗರದ ಮಾರುಕಟ್ಟೆ, ಹಬ್ಬುವಾಡ, ಬಸ್ ಡಿಪೋ ಎಲ್ಲ ಗಣಪತಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು.

ಇದನ್ನೂ ಓದಿ:ಸೆ.25 ರಂದು ಕಾರವಾರದಲ್ಲಿ ಸಚಿವ ವೈದ್ಯ ಜನತಾ ದರ್ಶನ
ಅಮದಳ್ಳಿಯ ವೀರ ಗಣಪತಿ ದೇವಸ್ಥಾನದಲ್ಲಿ ಸರಸ್ವತೀ ಜಿ.ಕೆ.ರಾಮ್ ಅವರು ತಮ್ಮ ಪತಿ ಜಿ.ಕೆ.ರಾಮ್ ಸ್ಮರಣಾರ್ತಯ ಅನ್ನಸಂತರ್ಪಣೆ ನೆರವೇರಿಸಿದರು. ಎಲ್ಲ ಭಕ್ತಾದಿಗಳಿಗೆ ಮೋದಕ, ಚಕ್ಕುಲಿ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net