

ಸಿರಗುಪ್ಪ: ತಾಲೂಕಿನ ನಾಲ್ಕು ಪೊಲೀಸ್ ಠಾಣೆ ಹಾಗೂ ಡಿವೈಎಸ್‌ಪಿ ಕಚೇರಿಯಲಿ ಬುಧವಾರ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಠಾಣೆಯಲ್ಲಿ ಚಾಮುಂಡೇಶ್ವರಿ ದೇವಿ ಭಾವಚಿತ್ರ, ಬಂದೂಕು, ರಿವಾಲ್ವರ್, ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಪೊಲೀಸ್ ಠಾಣೆಯನ್ನು ವಿದ್ಯುತ್ ದೀಪ, ಬಾಳೆ ದಿಂಡು, ತಳಿರು ತೋರಣ ಹಾಗೂ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ಶಾಸಕ ಬಿ.ಎಂ.ನಾಗರಾಜ, ಡಿವೈಎಸ್‌ಪಿ ಸಂತೋಷ ಚವ್ಹಾಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸನಗೌಡ, ವಾಲ್ಮೀಕಿ ವಿದ್ಯಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಸತೀಶ್, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಟಿ.ನರಸಿಂಹ ನಾಯಕ, ಸರ್ವಧರ್ಮಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆಮಲ್ಲಿಕಾರ್ಜುನ, ಠಾಣೆ ಸಿಬ್ಬಂದಿ ಇದ್ದರು.