ಭಗವತಿಯನ್ನು ಆರಾಧಿಸಿ

BIRUR durga
ಬೀರೂರಿನ ಶ್ರೀ ದುರ್ಗಾದೇವಿಯ ಸನ್ನಿಧಿಯಲ್ಲಿ ನಡೆದ ಪೂಜಾ ಕಾರ್ಯದಲ್ಲಿ ರಂಭಾಪುರಿ ಖಾಸಾಶಾಖಾ ಪೀಠದ ಶೀ ರುದ್ರಮುನಿ ಸ್ವಾಮೀಜಿ ಪಾಲ್ಗೊಂಡರು. ವನಿತಾ ಮಧು ಬಾವಿಮನೆ, ಸಹನಾ, ವಸಂತ್‌ಕುಮಾರ್ ಇತರರಿದ್ದರು.
Published on

ಬೀರೂರು: ಆಧ್ಯಾತ್ಮಿಕ ಮೌಲ್ಯದ ತಳಹದಿ ಮೇಲೆ ಮೌಲ್ಯಯುತ ಬದುಕು ಕಟ್ಟಿಕೊಂಡಿರುವ ಹಿಂದು ಸಮಾಜ ಧರ್ಮಾಚರಣೆಯ ಮೌಲ್ಯಗಳನ್ನು ಮರೆತರೆ ಅಪಾಯ ಕಟ್ಟಿಟ್ಟಬುತ್ತಿ. ನಮ್ಮೆಲ್ಲರ ಅಂತಃಶಕ್ತಿ ವೃದ್ಧಿಗೆ ಪ್ರೇರಕಳಾದ ಭಗವತಿಯನ್ನು ಆರಾಧಿಸಬೇಕಿದೆ ಎಂದು ಬೀರೂರಿನ ಬಾಳೆಹೊನ್ನೂರು ರಂಭಾಪುರಿ ಖಾಸಾಶಾಖಾ ಪೀಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀ ಬನಶಂಕರಿ ದೇವಾಲಯದಲ್ಲಿ ಮಂಗಳವಾರ ಬನಶಂಕರಿ ಮಹಿಳಾ ಸಂಘದಿಂದ ಪ್ರತಿಷ್ಠಾಪಿಸಿರುವ ಶ್ರೀ ದುರ್ಗಾದೇವಿಯ 5ನೇ ವರ್ಷದ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದುಷ್ಟ ಸಂಹಾರಕ ಮತು ಶಿಷ್ಟ ಸಂರಕ್ಷಕಳಾಗಿ ನಮ್ಮಲ್ಲಿ ಪಾರ್ವತಿ, ಲಕ್ಷ್ಮೀ ಮತ್ತು ಸರಸ್ವತಿ ಸ್ವರೂಪದಲ್ಲಿ ಜಗನ್ಮಾತೆ ನೆಲೆಸಿದ್ದಾಳೆ. ಮಕ್ಕಳಲ್ಲಿ ಧರ್ಮಜಾಗೃತಿ ಮಹತ್ವ ತಿಳಿಸದಿದ್ದರೆ ಅಪಾಯ ಕಾದಿದೆ. ದೇವಾಂಗ ಸಮಾಜ ನಿರ್ಮಿಸುತ್ತಿರುವ ನೂತನ ದೇವಾಲಯ ಎಲ್ಲ ಭಕ್ತರ ಸಹಕಾರದಿಂದ ಬೇಗ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿ ಎಂದು ಆಶಿಸಿದರು.
ಮಹಿಳಾ ಸಂಘದಿಂದ ಪುರಸಭಾ ಅಧ್ಯಕ್ಷೆ ವನಿತಾ ಮಧು ಭಾವಿಮನೆ ದಂಪತಿಯನ್ನು ಸನ್ಮಾನಿಸಲಾಯಿತು. ದೇವಾಂಗ ಸಮಾಜ ಅಧ್ಯಕ್ಷ ಲೋಕೇಶ್, ದೇವಾಂಗ ನೌಕರಸಂಘದ ಅಧ್ಯಕ್ಷ ಸುರೇಶ್‌ಕುಮಾರ್, ಮಹಿಳಾ ಸಂಘದ ಸವಿತಾ ಡಾ. ಜಗದೀಶ್, ಪುರಸಭಾ ಸದಸ್ಯ ಸಹನಾ ವೆಂಕಟೇಶ್, ವಸಂತಕುಮಾರ್, ಹರೀಶ್, ಸುಜಾತಾ, ಕುಸುಮಾ, ಶಿವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net