ವಿವಿಧ ದೇಗುಲಗಳಲ್ಲಿ ಪೂಜೆ

24kkr1(7-25 angala parameswari
ಕಿಕ್ಕೇರಿಯ ಅಂಗಾಳಪರಮೇಶ್ವರಿ ದೇಗುಲದಲ್ಲಿ ಗುರುವಾರ ಭೀಮನ ಅಮಾವಾಸ್ಯೆ ಪ್ರಯುಕ್ತ ಹೋಮ-ಹವನ ಜರುಗಿದವು.
Published on

ಕಿಕ್ಕೇರಿ: ಹೋಬಳಿಯಾದ್ಯಂತ ವಿವಿಧ ದೇಗುಲಗಳಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಗುರುವಾರ ವಿಶೇಷ ಪೂಜೆ ನೆರವೇರಿತು.

ಗ್ರಾಮದ ಶಕ್ತಿದೇವಿಗಳಾದ ಕಿಕ್ಕೇರಮ್ಮ, ಪಾರ್ವತಿದೇವಿ, ಹೊನ್ನಾಳಮ್ಮ, ಅಂಗಾಳಪರಮೇಶ್ವರಿ, ಸಿಂಗಮ್ಮ ದೇಗುಲ, ಬೇವಿನಹಳ್ಳಿಯ ಅಂಕನಾಥೇಶ್ವರ, ಚಾಮುಂಡೇಶ್ವರಿ, ತುಳಸಿಗೇಟ್ ರಾಜರಾಜೇಶ್ವರಿ, ವಡಕಹಳ್ಳಿ ಚಿಕ್ಕಳಮ್ಮ, ಸಾಸಲು ಕುದುರೆಮಂಡಮ್ಮ, ಚಿಕ್ಕತರಹಳ್ಳಿ ಕೋಡಿಮಾರಮ್ಮ, ಬೋಳಮಾರನಹಳ್ಳಿ ಲಕ್ಷ್ಮೀದೇವಿ, ರೇಣುಕಾದೇವಿ ಯಲ್ಲಮ್ಮ ಮತ್ತಿತರ ದೇಗುಲಗಳಲ್ಲಿ ಅಭಿಷೇಕ, ಹೋಮ, ಹವನಾದಿಗಳು ನಡೆದವು.

ದೇಗುಲಗಳನ್ನು ತಳಿರು ತೋರಣ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವರಿಗೆ ವಿವಿಧ ಪರಿಮಳ ಪುಷ್ಪ, ಆಭರಣಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಬೆಲ್ಲದ ಮೇಲೆ ನಿಂಬೆಹಣ್ಣಿನ ದೀಪವಿಟ್ಟು ಮಹಿಳೆಯರು ದೇವರಿಗೆ ಆರತಿ ಬೆಳಗಿದರು. ಭಕ್ತರಿಗೆ ಹೂ, ತೀರ್ಥ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net