ಶ್ರೀ ಸಬ್ಬಮ್ಮ ದೇವರ ಚಾವಡಿ ಕಟ್ಟೆಯಲ್ಲಿ ಪೂಜೆ

15SPT2
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಕೂತಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ಚಾವಡಿ ಕಟ್ಟೆಯಲ್ಲಿ ವಿಶೇಷ ಪೂಜೆ ಮತ್ತು ಮಹಿಳೆಯರಿಂದ ಪ್ರದಕ್ಷಿಣೆ ನಡೆಯಿತು.
Published on

ಸೋಮವಾರಪೇಟೆ: ಸಂಕ್ರಾಂತಿ ಹಬ್ಬದಂದು ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಕೂತಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ಚಾವಡಿ ಕಟ್ಟೆಯಲ್ಲಿ ಬುಧವಾರ ವಿಶೇಷ ಪೂಜೆ ನಡೆಯಿತು.

ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಂತೆ ದೇವರ ಕಟ್ಟೆಯಲ್ಲಿ ಗ್ರಾಮದ ಒಕ್ಕಲಿಗ ಮನೆತನದ ಹೇಣಿಗೆ ತಂದಿಟ್ಟು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಹೇಣಿಗೆ ಹೊತ್ತ ಮಹಿಳೆಯರು, ಗ್ರಾಮಸ್ಥರು ದೇವರ ಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಸಮೀಪದ ಶಾಂತಳ್ಳಿಯ ಕುಮಾಲಿಂಗೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು.

ಗ್ರಾಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಂ.ಜಯರಾಮ್, ಕಾರ್ಯದರ್ಶಿ ಯಾದವ್‌ಕುಮಾರ್, ಉಪಾಧ್ಯಕ್ಷ ಕೆ.ಡಿ.ಗಿರೀಶ್, ಖಜಾಂಚಿ ಲಕ್ಷ್ಮಯ್ಯ, ಭಾನುಪ್ರಸಾದ್, ಭರತ್, ಜಿತೇಂದ್ರ, ಅರ್ಚಕ ಅನಂತರಾಮ್ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net