ಚಂದ್ರಪುರ ಶಿಶಿಲ ಜಿನಮಂದಿರದಲ್ಲಿ ಆರಾಧನೆ

jina mandira
Published on

ಬೆಳ್ತಂಗಡಿ : ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಸಂಪತ್ ಶುಕ್ರವಾರ ಪ್ರಯುಕ್ತ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಗಂಧ ಅಭಿಷೇಕ, ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಶ್ರೀ ಸರ್ವಾಹ್ನ ಯಕ್ಷ ಆರಾಧನೆ ಅಳದಂಗಡಿಯ ಪ್ರತಿಷ್ಠಾಪುರೋಹಿತ ಪದ್ಮ ಪ್ರಭ ಇಂದ್ರರು ಶ್ರೀ ಅರಹಂತ ಇಂದ್ರ ಶ್ರೀಕೀರ್ತಿ ಇಂದ್ರ, ಇನ್ನಿತರ ಪುರೋಹಿತರ ನೇತೃತ್ವದಲ್ಲಿ ನಡೆಯಿತು.

ಲೋಕ ಕಲ್ಯಾಣಾರ್ಥವಾಗಿ ಮಾಡಿದ ಆರಾಧನೆ ಪೂಜಾ ಕರ್ತೃಗಳಾಗಿ ನಾರಾವಿ ಮೇಲಂಟೆ ಗುತ್ತು ಪ್ರೇಮ ನಿಲಯದ ಪ್ರೇಮಕಲಾ ಭಾಗವಹಿಸಿದ್ದರು. ಆಡಳಿತ ಮಂಡಳಿ ಡಾ.ಕೆ.ಜಯಕೀರ್ತಿ ಜೈನ್, ಎಚ್.ವಿಜಯಕುಮಾರ್, ಜಿನರಾಜ ಪೂವಣಿ, ಫಣಿರಾಜ್ ಜೈನ್ ಗುಣವರ್ಮ, ವೀರೇಂದ್ರ ಕುಮಾರ್, ಜಿತೇದ್ರ ಜೈನ್, ಪಿ.ಎನ್., ರವಿರಾಜ್ ಪರಪ್ಪು, ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net