ಗುರೂಜಿ ಹತ್ಯೆ ನಡೆದ ಸ್ಥಳದಲ್ಲಿ ಮತ್ತೆ ಪೂಜೆ

H20 President Hotel 1
Published on

ಹುಬ್ಬಳ್ಳಿ: ಸರಳ ವಾಸ್ತು ಸಂಸ್ಥಾಪಕ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಸ್ಥಳದಲ್ಲಿ ಇಲ್ಲಿನ ಉಣಕಲ್​ನ ದಿ ಪ್ರೆಸಿಡೆಂಟ್ ಹೋಟೆಲ್ ಸಿಬ್ಬಂದಿ ಬುಧವಾರ ಮತ್ತೊಮ್ಮೆ ಹೋಮ- ಹವನ ನಡೆಸಿದರು. ಗುರೂಜಿ ಹತ್ಯೆ ಪ್ರಕರಣದ ಆಘಾತದಿಂದ ಇನ್ನೂ ಹೊರಬಾರದ ಹೋಟೆಲ್ ಸಿಬ್ಬಂದಿ, ಮತ್ತೊಮ್ಮೆ ಶಾಂತಿ ಪೂಜೆ- ಪುನಸ್ಕಾರ ಹಮ್ಮಿಕೊಂಡಿದ್ದರು. ಹೋಟೆಲ್​ನ ಲಾಬಿಯಲ್ಲಿ ಗುರೂಜಿ ಹತ್ಯೆ ನಡೆದ ಸ್ಥಳದಲ್ಲಿ ಐದಾರು ಅರ್ಚಕರ ತಂಡ ಅಘೋರ ಹೋಮ, ಉದಕ ಶಾಂತಿ, ಸುದರ್ಶನ ಹೋಮ, ಗೋಪೂಜೆ, ಅಕಲಾ ಪೂಜೆ ನಡೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net