

ಕಡೂರು: ಮನುಷ್ಯ ತನ್ನ ಬದುಕಿನ ಚಿಂತೆಯನ್ನು ಸಂತೆಯನ್ನಾಗಿಸಿಕೊಂಡು ಭವಿಷದ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದು ಚಿಂತಕ ಜಿ.ಆರ್.ಶಿವಮೂರ್ತಿ ಹೇಳಿದರು.
ಗಿರಿಯಾಪುರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಶ್ರಾವಣ ಸಂಜೆ ಶರಣ ಸಂದೇಶ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಮನುಷ್ಯ ಭೂತಕಾಲ ಮತ್ತು ಭವಿಷ್ಯತ್ ಕಾಲದ ಬಗ್ಗೆ ಚಿಂತೆ ಮಾಡುತ್ತಾ ವರ್ತಮಾನದ ಬದುಕನ್ನು ಮರೆತು ತನ್ನ ಮನ ಶಾಂತಿ ಹಾಳುಮಾಡಿಕೊಳ್ಳುತ್ತಿದ್ದಾನೆ ಎಂದರು.
ಆಸೆ ಆಮಿಷಕ್ಕೆ ಒಳಗಾಗಿ ಸ್ವಾರ್ಥಪರವಾಗಿ ಚಿಂತಿಸುವ ಮೂಲಕ ಮನುಷ್ಯತ್ವವನ್ನು ಮರೆಮಾಚಿದ್ದಾನೆ. ಆಸೆಯ ವ್ಯಾಮೋಹದ ಬದುಕಿನಲ್ಲಿ ಸಿಲುಕಿ ಮಾನಸಿಕ ನೆಮ್ಮದಿ ಹಾಳುಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಗ್ರಾಮದ ಏಳ್ಗೆಗೆ ಶ್ರಮಿಸಿದ ಹಿರಿಯರನ್ನು ಗೌರವಿಸಲಾಯಿತು.ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಂ.ರಂಗಪ್ಪ, ಹಿರಿಯ ಮುಖಂಡ ಜಿ.ಸಿ.ಶಿವಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ವೀರೂಪಾಕ್ಷಪ್ಪ, ಉಪಾಧ್ಯಕ್ಷ ಯಗಟಿಪುರ ಪ್ರಸನ್ನ, ಅಜ್ಜಂಪುರ ತಾಲೂಕು ಅಧ್ಯಕ್ಷ ಡಿ.ಪಿ.ರಾಜಪ್ಪ, ಜಿ.ಪಿ.ಪ್ರಭುಕುಮಾರ್, ಕಾರ್ಯದರ್ಶಿ ಮೋಹನ್‌ಕುಮಾರ್, ಸಿ.ಕೆ. ಸ್ವಾಮಿ, ಜಿ.ಸಿ.ಷಡಾಕ್ಷರಿ , ಜಿ.ಪಿ.ಹಿರಣ್ಯಮೂರ್ತಿ, ಸಿ.ಎನ್.ರಾಮಪ್ಪ, ಉಮಾ ಮಹೇಶ್ವರಪ್ಪ , ಲತಾ ಮುರುಗೇಶ ಮತ್ತಿತರಿದ್ದರು.