

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಸಚಿವ ಸಂಪುಟ ಸಭೆಯಲ್ಲಿ ಅಂತಿಮ ಮುದ್ರೆ ಬಿದ್ದು, ಯೋಜನೆಗೆ ಬಜೆಟ್ ಮೊತ್ತವೂ ನಿಗದಿಯಾಗಿ, ಸಿದ್ದೇನಾಯಕನಹಳ್ಳಿ ಬಳಿ 9.38 ಎಕರೆ ಜಾಗ ಮೀಸಲಾಗಿದ್ದರೂ ದೊಡ್ಡಬಳ್ಳಾಪುರಕ್ಕೆ ಮಂಜೂರಾಗಿದ್ದ "ಜಿಲ್ಲಾಸ್ಪತ್ರೆ' ಯೋಜನೆಯೀಗ ತಾಲೂಕಿನಿಂದ ಕೈತಪು$್ಪವ ಆತಂಕ ಎದುರಾಗಿದೆ. ಹೌದು...ಇಂಥದ್ದೊಂದು ಅನುಮಾನ ಸೃಷ್ಟಿಯಾಗಲು ಪ್ರಮುಖ ಕಾರಣ 9.38 ಎಕರೆ ಜಾಗದ ಬಳಿಯೇ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯಡಿ ನಡೆಯುತ್ತಿರುವ ಕ್ರಿಟಿಕಲ್ ಕೇರ್ ಟಕದ ಕಟ್ಟಡ ಕಾಮಗಾರಿ ಸ್ಥಗಿತಕ್ಕೆ ಸೂಚನೆ ಬಂದಿರುವುದು. ಹೀಗಾಗಿ ಜಿಲ್ಲಾಸ್ಪತ್ರೆ ಉಳಿವಿಗಾಗಿ ತಾಲೂಕಿನ ಜನತೆ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದು, "ಜಿಲ್ಲಾಸ್ಪತ್ರೆ ಹೋರಾಟ ಸಮಿತಿ' ಅಸ್ತಿತ್ವಕ್ಕೆ ಬಂದಿದೆ.
ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ದೇವನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ಮಾಡಿದ್ದು, "ಜಿಲ್ಲಾಸ್ಪತ್ರೆ' ಯೋಜನೆಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸುವುದಷ್ಟೇ ಬಾಕಿ ಇತ್ತು.
ಯಾವ ಹಂತದಲ್ಲಿದೆ ಜಿಲ್ಲಾಸ್ಪತ್ರೆ?: 2019&20ನೇ ಸಾಲಿನ ಬಜೆಟ್ನಲ್ಲಿ ತಾಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರದಿಂದ ೂಷಣೆ ಆಗಿತ್ತು. ಬಳಿಕ 2023ರ ಮಾರ್ಚ್ನಲ್ಲಿ 167 ಕೋಟಿ ರೂ. ಬಜೆಟ್ ನಿಗದಿ ಮಾಡಿದ್ದು, ಒಟ್ಟು ಎರಡು ಕಂತಿನಲ್ಲಿ ಕಟ್ಟಡ ಕಾಮಗಾರಿಗಾಗಿ 103 ಕೋಟಿ ರೂ. ಮತ್ತು 64 ಕೋಟಿ ರೂ. ಸಿಬ್ಬಂದಿ ಮತ್ತು ಉಪಕರಣಗಳಿಗಾಗಿ ಎಂದು ಅನುದಾನ ಮೀಸಲಿಡಲಾಗಿತ್ತು. 2024ನೇ ಸಾಲಿನಲ್ಲಿ 50.10 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮೋದನೆಯಾಗಿದೆ. ಈವರೆಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿಲ್ಲ. ಸದ್ಯ ಜಿಲ್ಲಾಸ್ಪತ್ರೆಯ ಪರಿಷತ ಬಜೆಟ್ 193 ಕೋಟಿ ರೂಪಾಯಿ ಆಗಿದೆ. ಸಿಸಿಯು ಕಟ್ಟಡ ಕಾಮಗಾರಿ ಸ್ಥಗಿತಕ್ಕೆ ನೋಟಿಸ್: ಜಿಲ್ಲಾಸ್ಪತ್ರೆಗೆಂದು ನಗರದ ಸಿದ್ದೇನಾಯಕನಹಳ್ಳಿ ಬಳಿ ಮೀಸಲಿಟ್ಟಿರುವ 9.38 ಗುಂಟೆ ಜಮೀನು ಬಳಿಯೇ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯಡಿ ಕ್ರಿಟಿಕಲ್ ಕೇರ್ ಟಕದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಈಗ ಆರೋಗ್ಯ ಇಲಾಖೆಯಿಂದ ಕಾಮಗಾರಿ ಸ್ಥಗಿತಗೊಳಿಸುವಂತೆ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ. ನಿಯಮಗಳ ಪ್ರಕಾರ ಜಿಲ್ಲಾಸ್ಪತ್ರೆಯಲ್ಲಿಯೇ ಕ್ರಿಟಿಕಲ್ ಕೇರ್ ಯೂನಿಟ್ ಇರಬೇಕು ಎಂಬ ಷರತ್ತು ಇದೆ. ಕಟ್ಟಡ ಕಾಮಗಾರಿ ನಿಲ್ಲಿಸುವ ನೋಟಿಸ್ ನೀಡಿರುವುದು ಜಿಲ್ಲಾಸ್ಪತ್ರೆ ಕೈ ತಪ್ಪುವ ಮುನ್ಸೂಚನೆ ನೀಡಿದೆ.
ಆರ್ಥಿಕ ಇಲಾಖೆಯಿಂದ ಸ್ಪಷ್ಟತೆ ಇಲ್ಲ : ಜಿಲ್ಲಾಸ್ಪತ್ರೆ ಕುರಿತು ಗುರುವಾರ ವಿಧಾನಸಭೆ ಕಲಾಪದಲ್ಲಿ ಶಾಸಕ ಧೀರಜ್ ಮುನಿರಾಜು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 193 ಕೋಟಿ ರೂ. ವೆಚ್ಚದ ಜಿಲ್ಲಾಸ್ಪತ್ರೆ ಯೋಜನೆಯನ್ನು ಆರ್ಥಿಕ ಇಲಾಖೆಗೆ ರವಾನಿಸಿದ್ದೇವೆ. ಆದರೆ ಈಗಿರುವ ತಾಯಿ&ಮಗು ಆಸ್ಪತ್ರೆಯಲ್ಲಿಯೇ 100 ಬೆಡ್ಗಳ ಜತೆಗೆ 100 ಬೆಡ್ಗಳನ್ನು ಹೆಚ್ಚಿಸಿ, ಕ್ರಿಟಿಕಲ್ ಕೇರ್ ಟಕವನ್ನು ಇಲ್ಲಿಯೇ ನಡೆಸುವ ಚಿಂತನೆಯೊಂದಿಗೆ ಸಿಸಿಯುಗೆ ಸ್ಟಾಪ್ ಆರ್ಡರ್ ನೀಡಲಾಗಿತ್ತು. ಆದರೆ ಈಗ ತೆರವು ಮಾಡಲಾಗಿದೆ. ಖರ್ಚು ದೊಡ್ಡದಲ್ಲ, ಆದರೆ ಸರಿಯಾದ ರೀತಿಯಲ್ಲಿ ಮಾಡಬೇಕು. ಇರುವ ಆಸ್ಪತ್ರೆಯಲ್ಲಿಯೇ ಇದನ್ನು ಜೋಡಿಸಿ ಅನುಕೂಲ ಮಾಡಿ ಖರ್ಚು ಉಳಿಸುವ ಬಗ್ಗೆ ಚಿಂತಿಸಲಾಗಿತ್ತು. ಈಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ಧೀರಜ್ ಮುನಿರಾಜು ಅವರೂ ಪ್ರತ್ಯೇಕ ಜಾಗವಿದೆ ಅಲ್ಲೇ ಮಾಡಿ ಎನ್ನುತ್ತಿದ್ದಾರೆ. ಹೀಗಾಗಿ ಎರಡೂ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ರವಾನಿಸಲಾಗಿದೆ. ಆರ್ಥಿಕ ಇಲಾಖೆ ಕಾರ್ಯದರ್ಶಿಗಳೊಂದಿಗಿನ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಜಿಲ್ಲಾಸ್ಪತ್ರೆ ಯೋಜನೆಗೆ ಸ್ಪಷ್ಟತೆ ಸಿಗದಂತಾಗಿದೆ.
ಜಿಲ್ಲಾಸ್ಪತ್ರೆ ದೊಡ್ಡಬಳ್ಳಾಪುರಕ್ಕೆಂದು ಮಾತು : ಜಿಲ್ಲಾಕೇಂದ್ರ ದೊಡ್ಡಬಳ್ಳಾಪುರದಲ್ಲೇ ಆಗಬೇಕು ಎಂದು ಸಾಕಷ್ಟು ಹೋರಾಟಗಳು ನಡೆದಾಗ ಜಿಲ್ಲಾಕೇಂದ್ರ ಕೊನೆಗೂ ದೇವನಹಳ್ಳಿ ಪಾಲಾಯಿತು. ಈ ವೇಳೆ ಆಗಿನ ಜಿಲ್ಲಾಮಂತ್ರಿ ಕೃಷ್ಣಭೈರೇಗೌಡ ನೇತೃತ್ವದಲ್ಲಿ ಹೋರಾಟಗಾರರು, ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ದೊಡ್ಡಬಳ್ಳಾಪುರಕ್ಕೆ ಪ್ರಮುಖ ಜಿಲ್ಲಾಮಟ್ಟದ ಕೇಂದ್ರಗಳನ್ನು ಮೀಸಲಿಡಲು ತೀರ್ಮಾನಿಸಲಾಯಿತು. ಇದರಲ್ಲಿ ಜಿಲ್ಲಾಸ್ಪತ್ರೆ, ಜಿಲ್ಲಾಕ್ರೀಡಾಂಗಣ ದೊಡ್ಡಬಳ್ಳಾಪುರಕ್ಕೆ ಎಂದು ನಿರ್ಧರಿಸಲಾಯಿತು. ಇಷ್ಟಾಗಿಯೂ ಮತ್ತೆ ದೊಡ್ಡಬಳ್ಳಾಪುರಕ್ಕೆ ಜಿಲ್ಲಾಸ್ಪತ್ರೆ ಕೈತಪ್ಪುವ ಆತಂಕ ಎದುರಾಗಿದೆ.
ಹೋರಾಟ ಸಮಿತಿ ಅಸ್ತಿತ್ವಕ್ಕೆ : ತಾಲೂಕಿನಿಂದ ಜಿಲ್ಲಾಸ್ಪತ್ರೆ ದೂರವಾಗಬಾರದು ಎಂಬ ಕಾರಣಕ್ಕೆ ಹೋರಾಟಗಾರರು ಒಂದಾಗಿ ಜಿಲ್ಲಾಸ್ಪತ್ರೆ ಹೋರಾಟ ಸಮಿತಿ ಕಟ್ಟಿ ಹೋರಾಟಕ್ಕೆ ಧುಮುಕಿದ್ದಾರೆ. ಡಿಎಸ್ಪಿ, ಡಿಸಿ, ಮಾಜಿ ಶಾಸಕ, ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಬೃಹತ್ ಪ್ರತಿಭಟನೆಯ ರೂಪುರೇಷೆಗೆ ಆ.16ರಂದು ಪಾತೀತವಾಗಿ ಸಭೆ ಕರೆಯಲಾಗಿದೆ. ಮಾಜಿ ಶಾಸಕ ವೆಂಕಟರಮಣಯ್ಯ, ಹಾಲಿ ಶಾಸಕ ಧೀರಜ್ ಮುನಿರಾಜು ಭಾಗಿಯಾಗುವ ಭರವಸೆ ನೀಡಿದ್ದಾರೆ.
ಒಳ್ಳೆ ಕೆಲಸಕ್ಕೆ ನೂರೆಂಟು ವ್ನಿಗಳು ಎಂಬಂತೆ ಜಿಲ್ಲಾಸ್ಪತ್ರೆ ಕಾಮಗಾರಿಗೂ ವ್ನಿ ಎದುರಾಗಿವೆ. 250 ಹಾಸಿಗೆಯ ಜಿಲ್ಲಾಸ್ಪತ್ರೆ ನಿರ್ಮಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ. > ಸಂಜೀವ್ ನಾಯಕ್ ಹಿರಿಯ ಕನ್ನಡ ಪರ ಹೋರಾಟಗಾರ ತಾಲೂಕಿನಲ್ಲಿ ಶಂಕುಸ್ಥಾಪನೆಯಾಗಿರುವ ಜಿಲ್ಲಾಸ್ಪತ್ರೆ ಕಾಮಗಾರಿ ವಿಳಂಬಗೊಳ್ಳುತ್ತಿದ್ದು, ಶ್ರೀ ಕಾಮಗಾರಿ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ತಾಲೂಕಿನ ವಿವಿಧ ಸಂಟನೆಗಳ ಮುಖಂಡರು ಸೇರಿ ಹೋರಾಟ ಸಮಿತಿ ರಚಿಸಿದ್ದೇವೆ. ಜಿಲ್ಲಾಸ್ಪತ್ರೆ ಇಲ್ಲಿಯೇ ಆಗಬೇಕು. > ಚಿದಾನಂದ ಹೋರಾಟ ಸಮಿತಿ ಸದಸ್ಯ