ಪಾರ್ಸಲ್ ಆಹಾರದಲ್ಲಿ ಜೀವಂತ ಹುಳು, ರೆಸ್ಟೋರೆಂಟ್ ವಿರುದ್ಧ ಠಾಣೆಗೆ ದೂರು ನೀಡಿದ ಮಹಿಳೆ

worm food
Published on

ಮಂಗಳೂರು: ಮನೆಗೆ ಪಾರ್ಸಲ್ ತರಿಸಿದ ಬರ್ಗರ್‌ನಲ್ಲಿ ಜೀವಂತ ಹುಳು ಪತ್ತೆಯಾಗಿದೆ ಎಂದು ನಗರದ ಲೇಡಿಹಿಲ್‌ನ ಸಲ್ಮಾ ಸಿಮ್ರನ್ ಎಂಬುವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರ ಮಾಲ್‌ವೊಂದರಲ್ಲಿ ಕಾರ್ಯಾಚರಿಸುತ್ತಿರುವ ರೆಸ್ಟೋರೆಂಟ್‌ನಿಂದ ಶನಿವಾರ ಸಾಯಂಕಾಲ ಒಟ್ಟು ಆರು ಚಿಕನ್ ಬರ್ಗರ್ ಆರ್ಡರ್ ಮಾಡಿದ್ದರು. ಈ ಪೈಕಿ ಒಂದರಲ್ಲಿ ಜೀವಂತ ಹುಳು ಪತ್ತೆಯಾಗಿದೆ. ನಾಲ್ಕನ್ನು ಮನೆಯವರು ಸೇವಿಸಿದ್ದು, ಎರಡು ಬಾಕಿ ಉಳಿದಿತ್ತು. ಅದರಲ್ಲಿ ಒಂದನ್ನು ತೆರೆದಾಗ ಹುಳು ಓಡಾಡಿದೆ. ಗಾಬರಿಗೊಂಡ ಅವರು ರೆಸ್ಟೋರೆಂಟ್ ಸಂಪರ್ಕಕ್ಕೆ ಯತ್ನಿಸಿದರೂ, ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ.ಬಳಿಕ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಗೊತ್ತಿಲ್ಲದೆ ತಿಂದು ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿರುವ ಸಲ್ಮಾ, ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net