

ಉಡುಪಿ: ಯೋಗ ಭಾರತದ ಆಧ್ಯಾತ್ಮಿಕ ಸಂಪತ್ತಾಗಿದ್ದು, ಅನಂತ ವಿಚಾರಗಳನ್ನು ಒಳಗೊಂಡಿದೆ. ಆಸನ, ಪ್ರಾಣಾಯಾಮದ ಜೊತೆಗೆ ಮನೋಯೋಗ, ಧ್ಯಾನಯೋಗ ಇತ್ಯಾದಿ ವಿಷಯಗಳ ಬಗ್ಗೆ ಇನ್ನಷ್ಟು ಅಧ್ಯಯನ, ಪ್ರಚಾರ ನಡೆಯಬೇಕು. ಭವಿಷ್ಯದಲ್ಲಿ ಯೋಗ ಯುಗ ನಿರ್ಮಾಣವಾಗಬೇಕು ಎಂದು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ರಾಜಾಂಗಣದಲ್ಲಿ ಪರ್ಯಾಯ ಫುತ್ತಿಗೆ ಮಠ, ಕೃಷ್ಣಮಠ ಹಾಗೂ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ವಿಜಯವಾಣಿ ದಿನಪತ್ರಿಕೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀಕೃಷ್ಣ ಯೋಗ ಕೇಂದ್ರ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ, ನಿರಂತರ ಯೋಗ ಕೇಂದ್ರ, ಕ್ರೀಡಾ ಭಾರತಿ ಸಹಯೋಗದೊಂದಿಗೆ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅಶೀರ್ವಚನ ನೀಡಿದರು.
ಶ್ರೀಕೃಷ್ಣ ಸಾಾತ್ ಯೋಗೇಶ್ವರ. ಗೀತೆಯ ಮೂಲಕ ಪ್ರತಿಯೊಬ್ಬರ ಜೀವನದ ಗುರಿ ಯೋಗಿಯಾಗುವುದು ಎಂಬ ಸ್ಪಷ್ಟ ಸಂದೇಶ ಜಗತ್ತಿಗೆ ನೀಡಿದ್ದಾನೆ. ಹೀಗಾಗಿ ಕೃಷ್ಣನ ಸನ್ನಿಧಿಯಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆ ಹೆಚ್ಚು ಅರ್ಥಪೂರ್ಣವಾಗಿದೆ. ಜಗತ್ತಿನಲ್ಲಿ ಯೋಗಶಾಸ್ತ್ರದ ಪ್ರಚಾರದ ದೀೆ ಪಡೆಯಬೇಕು ಎಂದರು.
ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ಭಟ್, ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಭಾರತ್ ಸ್ವಾಭಿಮಾನ್ ಟ್ರಸ್ಟ್ನ ವೆಂಕಟೇಶ್ ಮೆಹಂದಲೆ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ರಮೇಶ್ ಶೇರಿಗಾರ್, ಕೃಷ್ಣ ಯೋಗ ಕೇಂದ್ರದ ಅಮಿತ್ ಕುಮಾರ್ ಶೆಟ್ಟಿ, ಯೋಗ ವಿಜ್ಞಾನ ಕೇಂದ್ರದ ಪಿ.ವಿ. ಭಟ್, ರಾಜೇಶ್ ಕುಮಾರ್ ಶೆಟ್ಟಿ, ನಿರಂತರ ಯೋಗ ಕೇಂದ್ರದ ಮಮತಾ ಶೆಟ್ಟಿಗಾರ್, ಸೋಮಸುಂದರ್, ವಿದ್ಯಾಸನಿಲ್, ಲೀಲಾ ಅಮೀನ್, ಜಗದೀಶ್ ಕುಮಾರ್, ಪತಂಜಲಿ ಸಂಸ್ಥೆಯ ಅಜೀವ ಸದಸ್ಯರಾದ ಸುರೇಶ ಭಕ್ತ ಹಾಗೂ ಶಂಭು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಂಜಿತ್ ಕೆ. ಎಸ್. ಕಾರ್ಯಕ್ರಮ ನಿರೂಪಿಸಿದರು. ಲಕ್ಷ$್ಮಣ ಕಾಮತ್ ವಂದಿಸಿದರು.