ಎಕೆಪಿಎ ವತಿಯಿಂದ ನೀರಿನ ಮಹತ್ವ ಪ್ರಚಾರ ಅಭಿಯಾನ

New Project (48)
Published on

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಜಲ ದಿನದ ಅಂಗವಾಗಿ ನೀರಿನ ಮಹತ್ವದ ಬಗ್ಗೆ ಪ್ರಚಾರ ಅಭಿಯಾನ ಆಯೋಜಿಸಲಾಯಿತು.

ಎಕೆಪಿಎ ಜಿಲ್ಲಾ ಸಮಿತಿ ವತಿಯಿಂದ ತಯಾರಿಸಲಾದ ಭಿತ್ತಿಪತ್ರವನ್ನು ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಎಕೆಪಿಎ ಕಾಸರಗೋಡು ಜಿಲ್ಲಾ ಕ್ರಿಕೆಟ್ ಕೋರ್ಡಿನೇಟರ್ ರತೀಶ್ ರಾಮು, ಯೂನಿಟ್ ಕಾರ್ಯದರ್ಶಿ ವಿಶಾಕ್, ಕೋಶಾಧಿಕಾರಿ ಗಣೇಶ್ ರೈ, ಸಾಂತ್ವನ ಕೋರ್ಡಿನೇಟರ್ ಶಾಲಿನಿ ರಾಜೇಂದ್ರನ್, ಯೂನಿಟ್ ನಿರೀಕ್ಷಕ ಶ್ರೀಜಿತ್ ವಿದ್ಯಾನಗರ, ಸದಸ್ಯರಾದ ಸುಬ್ರಹ್ಮಣ್ಯ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಹಾಗೂ ಕೆ.ಎನ್.ರಾಮಕೃಷ್ಣ ಹೊಳ್ಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net