

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗ ಮತ್ತು ಕೇಂದ್ರ ಪ್ರವಾಸೋದ್ಯಮ ಕಚೇರಿ ಸಹಯೋಗದಲ್ಲಿ ಅ. 5ರಂದು ಬೆಳಗ್ಗೆ 11 ಗಂಟೆಗೆ ವಿಜಯ ಭುವನ ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ.
ಉತ್ತರಾಖಂಡದ ಇಂಟರ್ನ್ಯಾಷನಲ್ ಸೆಂಟರ್ ಾರ್ ರೆಸ್ಪಾನ್ಸಿಬಲ್ ಟೂರಿಸಂ ೌಂಡೇಷನ್ ನಿರ್ದೇಶಕಿ ಮನೀಷಾ ಪಾಂಡೆ ಅವರು ಪ್ರವಾಸೋದ್ಯಮ ಮತ್ತು ಶಾಂತಿ ಕುರಿತು ಮಾತನಾಡುವವರು. ಅತಿಥಿಗಳಾಗಿ ಕವಿವಿ ನಿಕಟ ಪೂರ್ವ ಕುಲಪತಿ ಪ್ರೊ.ಕೆ.ಬಿ.ಗುಡಸಿ, ಕವಿವಿ ಕುಲಸಚಿವ ಡಾ.ಎ. ಚೆನ್ನಪ್ಪ, ನಿವೃತ್ತ ಕುಲಸಚಿವ ಪ್ರೊ. ಎಸ್.ರಾಜಶೇಖರ ಭಾಗವಹಿಸಲಿದ್ದಾರೆ. ಪ್ರೊ.ಡಿ.ಬಿ.ಕರಡೋಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರವಾಸೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜಗದೀಶ ಕಿವುಡನವರ ತಿಳಿಸಿದ್ದಾರೆ.