ಶೌಚಾಲಯ ಬಳಸಿ ನೈರ್ಮಲ್ಯಕ್ಕೆ ಆದ್ಯತೆ ನೀಡಿ : ಇಓ ರೇವಣಸಿದ್ದಪ್ಪ ಕೆ. ಗೌಡರ್

Koodi
Published on
ಜೇವರ್ಗಿ ತಾಲೂಕಿನ ಕೂಡಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ  ನಮ್ಮ ಶೌಚಾಲಯ ನಮ್ಮ ಗೌರವ 
ಕಲಬುರಗಿ : ಬಯಲು ಶೌಚ ಮುಕ್ತ ಭಾರತವನ್ನಾಗಿಸಲು ಎಲ್ಲರು ಶೌಚಾಲಯ ಬಳಸಿ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಜೇವರ್ಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರೇವನಸಿದ್ದಪ್ಪ ಕೆ. ಗೌಡರ್ ಕರೆ ನೀಡಿದರು.
ಜೇವರ್ಗಿ ತಾಲೂಕಿನ ಕೂಡಿ ಗ್ರಾಮ ಪಂಚಾಯತ್ ಆವರಣದಲ್ಲಿ ಸೋಮವಾರ ಸಸಿಗೆ ನೀರುಣಿಸುವ ಮೂಲಕ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು, ಮಾತನಾಡಿದರು.
ಸರ್ಕಾರಗಳು, ಸಂಘ ಸಂಸ್ಥೆಗಳು ಹಲವಾರು ಯೋಜನೆಗಳನ್ನು ರೂಪಿಸಿ ಬಯಲು ಶೌಚ ಮುಕ್ತವನ್ನಾಗಿ ಮಾಡುವುದಕ್ಕೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಿರಾರು ಕೋಟಿ ಖರ್ಚು ಮಾಡಲಾಗುತ್ತಿದೆ. ಆದರೆ ಇಂದಿಗೂ ಜನರು ಶೌಚಾಲಯಗಳನ್ನು ಬಳಸದೆ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಜನ ಸಮುದಾಯಕ್ಕೆ ನೈರ್ಮಲ್ಯದ ಮಹತ್ವ ಹಾಗೂ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 19 ರಂದು ಹೊಸ ಥೀಮ್ ನೊಂದಿಗೆ ವಿಶ್ವ ಶೌಚಾಲಯ ದಿನ ಆಚರಣೆ ಮಾಡಲಾಗುತ್ತಿದೆ. ಅದೆ ರೀತಿ ಈ ವರ್ಷ ನಮ್ಮ  ಶೌಚಾಲಯ - ನಮ್ಮ ಗೌರವ ಘೋಷಣೆಯೊಂದಿಗೆ ವಿಶ್ವ ಶೌಚಾಲಯ ದಿನ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ದಿಸೆಯಲ್ಲಿ ಪ್ರತಿಯೊಬ್ಬರು ಬಯಲು ಶೌಚ ಮುಕ್ತ ಭಾರತದ ಕನಸನ್ನು ನನಸಾಗಿಸಲು ಪಣತೋಡಬೇಕು ಎಂದು ಹೇಳಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರವಿಂದ್ ಚವ್ಹಾಣ ಅವರು, ಸ್ವಾಗತಿಸಿ ಪ್ರಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಲಕಪ್ಪ ಕರೀಕಿಹಳ್ಳಿ, ಸದಸ್ಯರಾದ, ಸದಸ್ಯರಾದ, ಭಾಗಮ್ಮ ಸುಬೆದಾರ್, ಹಣಮಂತರಾಯ ಪ್ರಕಾಶಗೌಡ ಹಂದನೂರ್ ಬಾಬುರಾಯ್, ವೈದ್ಯಾಧಿಕಾರಿ ಅಮಿರ್ ಪಾಶಾ, ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರು ಈರಣ್ಣ ಬೂದಿಹಾಳ್, ಕರಾವಸೂಲಿಗರ ಸಿದ್ದಣಗೌಡ ಹಿರೇಗೌಡ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಾಲೆಯ ಮಕ್ಕಳು, ಗ್ರಾಮಸ್ಥರು, ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net