

ಯಲ್ಲಾಪುರ: ಯುವ ಸಮುದಾಯ ತಂಬಾಕು ಉತ್ಪನ್ನ ಹಾಗೂ ಮಾದಕ ವಸ್ತುಗಳಿಂದ ದೂರ ಇರಬೇಕೆಂದು ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಪಾಟೀಲ್ ಹೇಳಿದರು
.ಅವರು ಶುಕ್ರವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಡಿದರು. ತಹದಿ ಹರೆಯದಲ್ಲಿರುವ ಕುತೂಹಲ, ಚಂಚಲ ಮನೋಭಾವನೆಯಿಂದಾಗಿ ತಂಬಾಕಿನ ಉತ್ಪನ್ನಗಳು ಆಕರ್ಷಿಸುವ ಸಾಧ್ಯತೆ ಹೆಚ್ಚು. ಕಾರಣ ಅವುಗಳಿಂದ ದೂರ ಉಳಿದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು.
ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಟಿ ಭಟ್ಟ ತಂಬಾಕಿನ ದುಷ್ಪರಿಣಾಮ ಕುರಿತು, ನ್ಯಾಯವಾದಿ ಗಣೇಶ ಭಟ್ಟ ಕಾರ್ಮಿಕ ದಿನಾಚರಣೆ ಮಹತ್ವ ಕುರಿತು ಉಪನ್ಯಾಸ ನೀಡಿದರು.
ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ, ಸಹಾಯಕ ಸರ್ಕಾರಿ ಅಭಿಯೋಜಕಿ ಝೀನತ್ ಭಾನು ಶೇಖ್, ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ, ಆರೋಗ್ಯ ನಿರೀಕ್ಷಕ ಮಹೇಶ ತಾಳಿಕೋಟೆ, ವಿಶ್ವದರ್ಶನ ಸಂಸ್ಥೆಯ ಸಿಇಒ ಅಜಯ ಭಾರತೀಯ, ಉಪ ಪ್ರಾಂಶುಪಾಲ ವಿನಾಯಕ ಭಟ್ಟ ಇದ್ದರು.